ಕರ್ನಾಟಕ

ಸೈಬರ್‌ ಖದೀಮರಿಂದ ಕುಲಪತಿಗೆ ವಂಚನೆ!

Pinterest LinkedIn Tumblr


ಬೆಂಗಳೂರು: ಗದಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ತಿಮ್ಮೇಗೌಡ ಅವರಿಗೆ ಬ್ಯಾಂಕ್‌ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ ಆನ್‌ಲೈನ್‌ ಖದೀಮರು, ಅವರ ಮಗಳ ಎಟಿಎಂ ಕಾರ್ಡ್‌ ಮಾಹಿತಿ ಪಡೆದು ಖಾತೆಯಿಂದ 69,997 ರೂ. ಲಪಟಾಯಿಸಿದ್ದಾರೆ. ಈ ಸಂಬಂಧ ಪ್ರೋ. ತಿಮ್ಮೇಗೌಡ ಅವರು ನಗರದ ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ತಿಮ್ಮೇಗೌಡರು, ರಾಜರಾಜೇಶ್ವರಿ ನಗರದಲ್ಲಿದ್ದರು. ಈ ವೇಳೆ ಕರೆ ಮಾಡಿದ ಒಬ್ಬಾತ ಎಸ್‌ಬಿಐ ಅಧಿಕಾರಿ ಎಂದು ಪರಿಚಯಿಸಿಕೊಡಿದ್ದಾನೆ. ನಿಮ್ಮ ಮಗಳ ಎಟಿಎಂ ಕಾರ್ಡ್‌ ಅವಧಿ ತಾಂತ್ರಿಕ ಕಾರಣದಿಂದ ಮುಕ್ತಾಯವಾಗಿದೆ. ಅದನ್ನು ಸರಿಪಡಿಸಲು ಕಾರ್ಡ್‌ನ ಮಾಹಿತಿ ನೀಡಿ ಎಂದು ಹೇಳಿದ್ದಾನೆ. ನಿಜಕ್ಕೂ ಬ್ಯಾಂಕ್‌ ಅಧಿಕಾರಿಯೆಂದು ನಂಬಿದ ತಿಮ್ಮೇಗೌಡ ಅವರು, ಮಗಳ ಕಾರ್ಡ್‌ ವಿವರ ಹಾಗೂ ನಂತರ ಮೊಬೈಲ್‌ ಫೋನ್‌ಗೆ ಬಂದ ಒಟಿಪಿಯನ್ನು ತಿಳಿಸಿದ್ದಾರೆ. ಮಾಹಿತಿ ನೀಡಿದ ಬಳಿಕ ಕರೆ ಸ್ಥಗಿತಗೊಳಿಸುವಷ್ಟರಲ್ಲಿ ಬ್ಯಾಂಕ್‌ ಖಾತೆಯಿಂದ 69,997 ರೂ. ಕಡಿತವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Comments are closed.