ಕರ್ನಾಟಕ

ಡಿ.ಕೆ ಶಿವಕುಮಾರ್ ಹೇಳಿದರೆ ರೇಪ್ ಮಾಡಿಸ್ಕೋತೀರಾ ಅಂದ ವೈದ್ಯಾಧಿಕಾರಿ ವಿರುದ್ಧ ನರ್ಸ್ ದೂರು

Pinterest LinkedIn Tumblr


ಬೆಂಗಳೂರು: ಅವಾಚ್ಯ ಪದಗಳಿಂದ ಆಸ್ಪತ್ರೆ ನರ್ಸ್​ಗಳಿಗೆ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್​ “ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳಲು ನಾನು ಬಿಡುವುದಿಲ್ಲ,” ಎಂದು ಕಿಡಿಕಾರಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮ ಸೆಂಟರ್ ವೈದ್ಯಾಧಿಕಾರಿ ಸಚಿವ ಡಿ.ಕೆ ಶಿವಕುಮಾರ್ ಅವರ ಹೆಸರು ದುರ್ಬಳಕೆ ಮಾಡಿಕೊಂಡ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬುದು ನನಗೆ ಗೊತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಈ ಕುರಿತು ಡಾ. ಬಾಲಾಜಿ ಪೈ ಪ್ರತಿಕ್ರಿಯಿಸಿ, ನನ್ನ ಮೇಲೆ ಕೇಳಿ ಬಂದಿರುವ ಆರೋಪ ರಾಜಕೀಯ ಪ್ರೇರಿತ. ನಾನು ಆ ನರ್ಸ್‌ಅನ್ನು ನಿಂದಿಸಿಲ್ಲ. ನಾನು ಅವರ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಡಾ. ಮಧುಸೂಧನ್ ಸೇರಿ ಹಲವರು ಆ ನರ್ಸ್‌ಗೆ ಕಿರುಕುಳ ನೀಡುತ್ತಿದ್ದರು. ಈ ವೇಳೆ ಅವರ ಬೆಂಬಲಕ್ಕೆ ನಿಂತಿದ್ದೆ. ಆದರೆ ನಾನೇ ನಿಂದಿಸಿದ್ದೇನೆ ಎನ್ನುವ ವಿಚಾರ ಕೇಳಿ ಶಾಕ್‌ ಆಗಿದೆ ಎಂದು ತಿಳಿಸಿದ್ದಾರೆ.

ಯಾಕೆ ಹೀಗಾಯ್ತು ಎನ್ನುವುದು ಗೊತ್ತಿಲ್ಲ. ನರ್ಸ್ ಹಿಂದೆ ಇನ್ಯಾರೋ ಇದ್ದಾರೆ. ಅವರ ಕುಮ್ಮಕ್ಕಿನಿಂದಲೇ ಅವರು ಈ ರೀತಿ ಸುಳ್ಳು ದೂರು ಕೊಟ್ಟಿದ್ದಾರೆ. ನಾನು ಈ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.

ಏನಾಗಿತ್ತು…?

ಡೀನ್ ಆದೇಶದ ಮೇರೆಗೆ ಟ್ರಾಮ ಸೆಂಟರ್‌ನ ರೆಕಾರ್ಡ್‌ಗಳ ಪರಿಶೀಲನೆಗೆ ಬಂದ ಮತ್ತೊಬ್ಬ ವೈದ್ಯರಿಗೆ ಸ್ಟಾಪ್ ನರ್ಸ್ ಸುರೇಖಾ ರೆಕಾರ್ಡ್‌ಗಳನ್ನು ನೀಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮ್ ಸೆಂಟರ್ ವೈದ್ಯಾಧಿಕಾರಿ ಬಾಲಾಜಿ ಪೈ ಗಮನಕ್ಕೆ ತಾರದೇ ರೆಕಾರ್ಡ್ ಕೊಟ್ಟಿದ್ದಕ್ಕೆ ವೈದ್ಯಾಧಿಕಾರಿ ಕೆಂಡಾಮಂಡಲರಾಗಿದ್ದಾರೆ.

ಎಲ್ಲರ ಎದುರೇ ಅವ್ರು ಕೇಳಿದ್ರೂ ಅಂತ ಎಲ್ಲವನ್ನು ಕೊಡೋದಕ್ಕೆ ನಿಂಗೆ ಮಾನ ಮರ್ಯಾದೆ ಇಲ್ವಾ? ನಾಳೆ ಸಚಿವ ಡಿಕೆ ಶಿವಕುಮಾರ್ ಬಂದು ಬಾಲಾಜಿ ಎರಡು ಸ್ಟಾಪ್‌ನರ್ಸ್‌ಗಳನ್ನು ರೇಪ್ ಮಾಡಿ ಅಂತಾರೆ, ಆಗ ನೀವು ರೇಪ್ ಮಾಡಿಸಿಕೊಳ್ಳಲು ರೆಡಿ ಇರ್ತೀರಾ? ಡಿಕೆಶಿ ಮಿನಿಸ್ಟರ್ ಅಲ್ವಾ ಅವ್ರು ಹೇಳಿದಾಗ ನೀವು ರೆಪ್ಯೂಸ್ ಮಾಡಂಗಿಲ್ಲ ಎಂದೆಲ್ಲ ಅವಾಚ್ಯ ಪದದಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಬೆಂಗಳೂರು ಮೆಡಿಕಲ್ ಕಾಲೇಜ್‌ ಡೀನ್‌ಗೆ ಸ್ಟಾಫ್‌ ನರ್ಸ್‌ ಸುರೇಖಾ ಲಿಖಿತ ದೂರು ನೀಡಿದ್ದಾರೆ.

Comments are closed.