ರಾಷ್ಟ್ರೀಯ

ಪೊಲೀಸ್‌ ಹತ್ಯೆಗೆ ಪ್ರತೀಕಾರ; ಕುಲ್ಗಾಂವ್‌ನಲ್ಲಿ ತಕ್ಷಣವೇ 3 ಉಗ್ರರ ಹತ್ಯೆ

Pinterest LinkedIn Tumblr


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂವ್‌ ಜಿಲ್ಲೆಯ ಖುದ್ವಾನಿಯ ವಾನಿ ಮೊಹಲ್ಲಾ ಎಂಬಲ್ಲಿ ಭದ್ರತಾ ಪಡೆಗಳು ಭಾನುವಾರ ಭಾರೀ ಗುಂಡಿನ ಚಕಮಕಿ ನಡೆಸಿ ಮೂವರು ಉಗ್ರರನ್ನು ಹತ್ಯೆ ಗೈಯುವಲ್ಲಿ ಯಶಸ್ವಿಯಾಗಿದ್ದಾರೆ.

ಹತ್ಯೆಗೀಡಾದ ಉಗ್ರರು ಸಲೀಮ್‌ ಶಾ ಎಂಬ ಪೊಲೀಸ್‌ ಕಾನ್‌ಸ್ಟೆಬಲ್‌ರ ನ್ನು ಅಪಹರಿಸಿ ಶನಿವಾರ ಹತ್ಯೆಗೈದಿದ್ದರು. ಶಾ ಅವರು ರಜೆಯ ನಿಮಿತ್ತ ಮನೆಗೆ ಬಂದಿದ್ದಾಗ, ಶುಕ್ರವಾರ ರಾತ್ರಿ ಅವರನ್ನು ಉಗ್ರರು ಅಪಹರಿಸಿದ್ದರು.

ಪೊಲೀಸ್‌ ಹತ್ಯೆ ಬಳಿಕ ಉಗ್ರರ ಸುಳಿವಿನ ಹಿನ್ನಲೆಯಲ್ಲಿ ಬಿಎಸ್‌ಎಫ್,ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್ ಪಡೆಗಳು ಭಾರೀ ಕಾರ್ಯಾಚರಣೆಗಿಳಿದು ತಕ್ಷಣದಲ್ಲಿ ಮೂವರನ್ನು ಹತ್ಯೆಗೈದಿದ್ದಾರೆ. ಉಗ್ರರ ಬಳಿಯಿಂದ ಮೂರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ತಿಂಗಳಷ್ಟೇ ಉಗ್ರರು ಯೋಧ ಔರಂಗಬೇಜ್‌ ರನ್ನು ಅಪಹರಿಸಿ, ಹತ್ಯೆಗೈದಿದ್ದ ಘಟನೆ ಶೋಪಿಯಾನ್‌

Comments are closed.