ರಾಷ್ಟ್ರೀಯ

ಸ್ಮೋಕ್ ಮಾಡಬೇಡ ಎಂದಿದ್ದಕ್ಕೆ ತಮ್ಮನ ಹತ್ಯೆ

Pinterest LinkedIn Tumblr


ಹೊಸದಿಲ್ಲಿ: ಸ್ಮೋಕ್ ಮಾಡಬೇಡ ಎಂದಿದ್ದಕ್ಕೆ ಅಣ್ಣನೊಬ್ಬ ತಮ್ಮನನ್ನೇ ಕೊಲೆಗೈದ ಹೇಯ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ನಡೆದಿದ್ದು, ಬಹಳ ತಡವಾಗಿ ಬೆಳಕಿಗೆ ಬಂದಿದೆ.

ಸತ್ಯದೇವ್ ಕುಮಾರ್ ಕೊಲೆಯಾದ ದುರ್ದೈವಿಯಾಗಿದ್ದು ಆರೋಪಿ ಶಿಶುಪಾಲ್ ಕುಮಾರ್‌‌ನನ್ನು ಗುರುವಾರ ಬಂಧಿಸಲಾಗಿದೆ.

ಅನೇಕ ವರ್ಷಗಳಿಂದ ಶಿಶುಪಾಲ ದುಶ್ಚಟಗಳ ದಾಸನಾಗಿದ್ದ. ಆತನ ಸ್ಮೋಕಿಂಗ್ ಚಟದಿಂದ ಆತನದಷ್ಟೇ ಅಲ್ಲ, ಕುಟುಂಬದವರ ಆರೋಗ್ಯ ಹದಗೆಡುತ್ತಿರುವುದು ಸತ್ಯದೇವನನ್ನು ಚಿಂತೆಗೀಡು ಮಾಡಿತ್ತು. ಹೀಗಾಗಿ ಅಣ್ಣನಲ್ಲಿ ಕುಡಿತ ಮತ್ತು ಸಿಗರೇಟ್ ಸೇವನೆ ನಿಲ್ಲಿಸುವಂತೆ ಪದೇ ಪದೇ ಕೇಳಿಕೊಳ್ಳುತ್ತಿದ್ದ.

ಎಂದಿನಂತೆ ಬುಧವಾರ ಸಹ ಅಣ್ಣನಲ್ಲಿ ದುಶ್ಚಟ ತ್ಯಜಿಸುವಂತೆ ಕೇಳಿಕೊಂಡಿದ್ದಾನೆ. ತಮ್ಮನೆ ಸಲಹೆಯಿಂದ ರೋಸಿ ಹೋಗಿದ್ದ ಅಣ್ಣ ಆತನ ಬಳಿ ಜಗಳ ಪ್ರಾರಂಭಿಸಿದ್ದು, ಕಲಹ ತಾರಕಕ್ಕೇರುತ್ತಿದ್ದಂತೆ ತಮ್ಮನ ಕುತ್ತಿಗೆಗೆ ಶೂ ಲೇಸ್ ಸುತ್ತಿ ಎಳೆದಿದ್ದಾನೆ. ತಮ್ಮ ನೆಲಕ್ಕುರುಳುತಿದ್ದಂತೆ ಆತನ ಕುಡಿತದ ಅಮಲು ಇಳಿದು ಹೋಗಿದೆ. ತಮ್ಮನನ್ನು ಎಬ್ಬಿಸಲು ಪ್ರಯತ್ನಿಸಿ ಸೋತ ಆತ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲು ನಿರ್ಧರಿಸಿದ್ದಾನೆ.

ಅನುಮಾನಾಸ್ಪದ ಸಾವಿನ ತನಿಖೆ ಕೈಗೊಂಡ ಪೊಲೀಸರು ಅಣ್ಣ ಶಿಶುಪಾಲನನ್ನು ವಿಚಾರಿಸಿದಾಗ ಸತ್ಯ ಬಹಿರಂಗಗೊಂಡಿದೆ. ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಕೋಪದ ಭರದಲ್ಲಿ ಈ ಕೃತ್ಯವನ್ನೆಸಗಿರುವುದಾಗಿ ಹೇಳಿದ್ದಾನೆ.

Comments are closed.