ಕರ್ನಾಟಕ

ಬೌರಿಂಗ್‌ ಇನ್ಸ್ಟಿಟ್ಯೂಟ್ ಲಾಕರ್‌ನಲ್ಲಿ 550 ಕೋಟಿ ರೂ. ಮೌಲ್ಯದ ಆಸ್ತಿ ದಾಖಲೆ ಪತ್ತೆ

Pinterest LinkedIn Tumblr


ಬೆಂಗಳೂರು: ಬೌರಿಂಗ್ ಇನ್ಸ್ಟಿಟ್ಯೂಟ್‌ನಲ್ಲಿ ಉದ್ಯಮಿಯೊಬ್ಬರು ಬಳಸುತ್ತಿದ್ದ ಲಾಕರ್‌ನಲ್ಲಿ ಅಪಾರ ಆಭರಣ, ಹಣ ಮತ್ತು 550 ಕೋಟಿ ರೂ. ಮೌಲ್ಯದ ಆಸ್ತಿ ದಾಖಲೆ ಪತ್ತೆಯಾಗಿದೆ.

ಒಂದು ಲಾಕರ್‌ನಲ್ಲಿ 3 ಕೋಟಿ ರೂ. ನಗದು, ಗೋಲ್ಡ್ ಬಿಸ್ಕಟ್ ಮತ್ತು 4 ಕಡತ ಪತ್ತೆಯಾಗಿದೆ. ಅಲ್ಲದೆ ಹಣದ ಜೊತೆ ನೂರು ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿದೆ. ಕಳೆದ ಒಂದು ವರ್ಷದಿಂದ ಉದ್ಯಮಿ ಅವಿನಾಶ್ ಲಾಕರ್ ಬಳಸುತ್ತಿರಲಿಲ್ಲ ಎನ್ನಲಾಗಿದೆ.

ಉದ್ಯಮಿ ಅವಿನಾಶ್

ಐಟಿ ವಶಕ್ಕೆ ಹಣ ಮತ್ತು ಆಸ್ತಿ ಪತ್ರ: ಅವಿನಾಶ್ ಬೌರಿಂಗ್ ಇನ್ಸ್ಟಿಟ್ಯೂಟ್‌ನ ಸದಸ್ಯನಾಗಿದ್ದರು. ಕಳೆದ ಒಂದು ವರ್ಷದಿಂದ ಲಾಕರ್ ಬಳಸದ ಹಿನ್ನೆಲೆಯಲ್ಲಿ ಲಾಕರ್‌ಗಳನ್ನು ಆಡಳಿತ ಮಂಡಳಿ ಸ್ವಚ್ಛಗೊಳಿಸಲು ಮುಂದಾಗಿದ್ದು, ಆ ಸಂದರ್ಭದಲ್ಲಿ ಲಾಕರ್‌ನಲ್ಲಿ ಎರಡು ಬ್ಯಾಗ್‌ನಲ್ಲಿ ನಗದು ಮತ್ತು ಒಂದು ಬ್ಯಾಗ್‌ನಲ್ಲಿ 3.9 ಕೋಟಿ ರೂ., ಮತ್ತೊಂದು ಬ್ಯಾಗ್‌ನಲ್ಲಿ2 ಕೋಟಿ ರೂ. ಹಣ ಪತ್ತೆಯಾಗಿದೆ. ಅಲ್ಲದೆ ಚಿನ್ನದ ಬಿಸ್ಕತ್ ಮತ್ತು ನಾಲ್ಕು ಚಿನ್ನದ ಕಡಗ ಕೂಡ ಪತ್ತೆಯಾದ ಹಿನ್ನೆಲೆಯಲ್ಲಿ ಬೌರಿಂಗ್ ಇನ್ಸ್ಟಿಟ್ಯೂಟ್ ಆಡಳಿತ ಮಂಡಳಿ ಐಟಿ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದೆ.

ಬಳಿಕ ಬೆಂಗಳೂರು ಬೌರಿಂಗ್ ಇನ್ಸ್ಟಿಟ್ಯೂಟ್‌ ಕಾರ್ಯದರ್ಶಿ ಶ್ರೀಕಾಂತ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, 3.90 ಕೋಟಿ ರೂ. ನಗದು, 7.80 ಕೋಟಿ ಮೌಲ್ಯದ ಆಭರಣ, 650 ಗ್ರಾಂ. ಚಿನ್ನದ ಬಿಸ್ಕತ್ತು ಮತ್ತು 550 ಕೋಟಿ ರೂ. ‌ಮೌಲ್ಯದ ಆಸ್ತಿ ದಾಖಲೆ ಪತ್ತೆಯಾಗಿರುವುದಾಗಿ ಮಾಹಿತಿ ನೀಡಿದ್ದಾರೆ.

ಹಣ ಮತ್ತು ಒಡವೆ ಇಟ್ಟುಕೊಂಡು ದಾಖಲೆ ಕೊಡಿ ಎಂದು ಅವಿನಾಶ ಕಾಲಿಗೆ ಬಿದ್ದಿದ್ದರು ಎಂದಿರುವ ಶ್ರೀಕಾಂತ್, ಒಂದು ದಾಖಲೆಗೆ ಐದು ಕೋಟಿ ರೂ. ಸ್ಥಳದಲ್ಲೇ ಕೊಡುತ್ತೇನೆ ಎಂದು ಅವಿನಾಶ್ ಕಡೆಯ ವ್ಯಕ್ತಿ ನನಗೆ ಅಮಿಷ ಒಡ್ಡಿದ್ದರು ಎಂದು ಬಹಿರಂಗಪಡಿಸಿದ್ದಾರೆ.

ಪ್ರಸ್ತುತ ಪತ್ತೆಯಾಗಿರುವ ನಗದು, ಚಿನ್ನ ಮತ್ತು ಎಲ್ಲ ದಾಖಲೆಗಳನ್ನು ಐಟಿ ವಶಕ್ಕೆ ನೀಡಲಾಗಿದೆ. ಅವಿನಾಶ್ ತಾಯಿ ಕಿರಣ್ ಅಮರ್ ಲಾಲ್ ನಮ್ಮ ಕ್ಲಬ್‌ಗೆ ನಿಯತವಾಗಿ ಆಗಿ ಬರುತ್ತಿದ್ದರು. ಲಾಕರ್‌ಗೆ ತಿಂಗಳಿಗೆ ಬರೀ ಐದು ರೂ. ಶುಲ್ಕ ಇದೆ. ಆದರೆ, ಅಷ್ಟು ಹಣವನ್ನೂ ಕಟ್ಟಿಲ್ಲ ಎಂದು ಶ್ರೀಕಾಂತ್ ತಿಳಿಸಿದ್ದಾರೆ.

Comments are closed.