ಕರ್ನಾಟಕ

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿಲ್ಲದ ಮಳೆ; ಮೊಬೈಲ್​ ಚಾರ್ಜಿಂಗ್​ ಪೇಚಾಡುತ್ತಿರುವ ಜನ!

Pinterest LinkedIn Tumblr


ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಳೆದ 10ದಿನಗಳಿಂದ ಬಿಡುವು ನೀಡದಂತೆ ಮಳೆ ಸುರಿಯುತ್ತಿದ್ದು, ಜನರು ತತ್ತಿರಿಸಿದ್ದಾರೆ.

ಸೂರ್ಯ ಕಾಣದ ಮಳೆಯ ವಾತಾವರಣದಿಂದ ಹೈರಾಣಾಗಿರುವ ಜನರಿಗೆ ವಿದ್ಯುತ್​ ಸಂಪರ್ಕ ಕೂಡ ಇಲ್ಲದಂತೆ ಆಗಿದೆ. ಭಾರೀ ಮಳೆ-ಗಾಳಿಗೆ ಈಗಾಗಲೇ ಹಲವು ಮರ, ವಿದ್ಯುತ್​ ಕಂಬಗಳು ಧರೆಗೆ ಉರುಳಿದೆ. ಪರಿಣಾಮವಾಗಿ ಕಳೆದೊಂದು ವಾರದಿಂದ ವಿದ್ಯುತ್​ ಸಂಪರ್ಕವಿಲ್ಲದೆ ಜನರು ಪರದಾಡುತ್ತಿದ್ದಾರೆ. ಕರೆಂಟ್​ ಇಲ್ಲದ ಪರಿಣಾಮ ಮೊಬೈಲ್​ ಚಾರ್ಚ್​ ಇಲ್ಲದೇ ಜನರು ತಮ್ಮ ಸ್ನೇಹಿತರು, ಸಂಬಂಧಿಕರಿಗೆ ಸಂಪರ್ಕ ಮಾಡದೆ ತೊಂದರೆಗೆ ಇಡಾಗಿದ್ದಾರೆ.

ಜಿಲ್ಲೆಯ ಮೆಲ್ಪಾಲು ಗ್ರಾಮದ ಬಿಎಸ್​ಎನ್​ಎಲ್​ ನೆಟ್​ವರ್ಕ್​ ಒಂದೇ ಸಿಗುತ್ತಿದ್ದು, ಮೊಬೈಲ್​ ಚಾರ್ಚ್​ ಇಲ್ಲದೆ ಇರುವುದರಿಂದ ಜನರು ಜನರೇಟರ್​ ಮೊರೆ ಹೋಗಿದ್ದಾರೆ. ಜನರೇಟರ್​ ಆನ್​ ಆದ ಕೂಡಲೇ ಒಟ್ಟಿಗೆ ಹತ್ತಿಪ್ಪತ್ತು ಜನರು ಒಟ್ಟಿಗೆ ಚಾರ್ಚ್​ ಮೊರೆ ಹೋಗುತ್ತಿದ್ದಾರೆ.

ಭಾರೀ ಮಳೆಯಿಂದಾಗಿ ಪೆಟ್ರೋಲ್​ ತರಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗಿದ್ದು, ಒಮ್ಮೆ ಜನರೇಟರ್​ ಶುರುವಾದ ಕೂಡಲೇ ಗ್ರಾಮಸ್ಥರು ಮೊಬೈಲ್​ ಹಿಡಿದು ಬರುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ತಾಲೂಕು ಕೇಂದ್ರಗಳಲ್ಲಿಯೂ ವಿದ್ಯುತ್​ ಕಣ್ಣಾ ಮುಚ್ಚಾಲೆಯಾಡುತ್ತಿದ್ದು, ಜನರು ಕತ್ತಲೆಯಲ್ಲಿ ದಿನದೂಡುವಂತೆ ಆಗಿದೆ.

ಜಿಲ್ಲೆಯ ಕೊಪ್ಪ, ಬಾಳೆಹೊನ್ನೂರು, ಕಳಸ, ಕುದುರೆಮುಖ ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಬಾಳೆಹೊನ್ನೂರಿನಲ್ಲಿ ಭಾರೀ ಮಳೆ-ಗಾಳಿ ಭೂಕುಸಿತ ಉಂಟಾಗಿದ್ದು ತೋಟ ಹಾಗೂ ತೋಟದಲ್ಲಿ ಬಾವಿಗೆ ಹಾನಿಯಾಗಿದೆ

Comments are closed.