
ಬೆಂಗಳೂರು: ಸಾಫ್ಟ್‌ವೇರ್ ಕಂಪನಿ ಮಾಲೀಕನೊಬ್ಬ ಒಂದೇ ಬೈಕ್ ಬಳಸಿ ಸುಮಾರು 25 ಸರಗಳ್ಳತನ ಮಾಡಿರುವ ಆತಂಕಕಾರಿ ಮಾಹಿತಿ ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಹೈಟೆಕ್ ಕಳ್ಳ ಹಾಗೂ ಸಾಫ್ಟ್‌ವೇರ್ ಉದ್ಯಮಿಯಾಗಿರುವ ಪ್ರಭಾಕರ್ ಈವರೆಗೂ ತನ್ನ ಲಕ್ಕಿ ಬೈಕ್ ಆದ ವೆಸ್ಪಾ ಬಳಸಿ ಅನೇಕ ಸರಗಳನ್ನು ಕದ್ದಿದ್ದು, ಈ ಮೂಲಕ ಸುಮಾರು 10 ಲಕ್ಷದಷ್ಟು ಸಾಲ ತೀರಿಸಿದ್ದಾನೆ.
ಸುಮಾರು 25ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈತ ಒಂದೇ ಬೈಕ್ ಬಳಸಿ ಕಳ್ಳತನ ಮಾಡಿದ್ದಾನೆ. ಎಚ್ಎಸ್ಆರ್ ಲೇಔಟ್, ಕೋರಮಂಗಲ, ಮಡಿವಾಳ, ಜಯನಗರ ಹಾಗೂ ಬೆಂಗಳೂರಿನ ಇನ್ನೂ ಹಲವೆಡೆ ಈತ ಸರಗಳ್ಳತನ ಮಾಡಿದ್ದಾನೆ. ಕೆಲವೆಡೆ ಈತನ ಹೈಟೆಕ್ ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸರಗಳ್ಳತನ ಮಾಡುವಾಗ ಮುಖ್ಯಪೇದೆ ಮಲ್ಲಪ್ಪ ಮಲ್ಕಿ ಆತನನ್ನು ಬೆನ್ನಟ್ಟಿ ಸೆರೆ ಹಿಡಿದಿದ್ದರು. ಎಚ್ಎಸ್ಆರ್ ಲೇಔಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.