ರಾಷ್ಟ್ರೀಯ

ಅಸ್ಸಾಂ: ತೃತೀಯ ಲಿಂಗಿಯೊಬ್ಬರನ್ನು ನ್ಯಾಯಧೀಶರನ್ನಾಗಿ ನೇಮಕ

Pinterest LinkedIn Tumblr


ಗುವಾಹಟಿ: ಅಸ್ಸಾಂನಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ. ಸ್ವಾತಿ ಬಿ ಬರುವಾ ಎಂಬ ತೃತೀಯ ಲಿಂಗಿಯೊಬ್ಬರು ಲೋಕ್​ ಅದಾಲತ್​ನ ನ್ಯಾಯಧೀಶರಾಗಿ ನೇಮಕವಾಗಿದ್ದಾರೆ.
ತೃತೀಯ ಲಿಂಗಿಯಾಗಿರುವ ಸ್ವಾತಿ ಅವರು ನ್ಯಾಯಾಧೀಶರ ಸ್ಥಾನಕ್ಕೇರಿದ ಅಸ್ಸಾಂನ ಮೊದಲ ಮತ್ತು ರಾಷ್ಟ್ರದ ಮೂರನೇಯವರು ಎನಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಮೋಂಡಲ್​ ಎಂಬ ತೃತೀಯ ಲಿಂಗಿಯೊಬ್ಬರು ನ್ಯಾಯಾದೀಶ ಹುದ್ದೆ ಅಲಂಕರಿಸಿ, ರಾಷ್ಟ್ರದಲ್ಲೇ ಮೊದಲಿಗರೆನಿಸಿಕೊಂಡಿದ್ದರು. ನಂತರ, ವಿದ್ಯಾ ಕಾಂಬ್ಳೆ ಎಂಬುವವರು ಮಹಾರಾಷ್ಟ್ರದಲ್ಲಿ ಲೋಕ ಅದಾಲತ್​ನ ಮೀಡಿಯೇಟ್​ ನ್ಯಾಯದೀಶರಾಗಿ ನೇಮಕರಾಗಿದ್ದರು. ಇವರು ದೇಶದ ಎರಡನೇ ತೃತೀಯ ಲಿಂಗಿ ನ್ಯಾಯಾದೀಶರನಿಸಿಕೊಂಡಿದ್ದರು. ಈಗ ಸ್ವಾತಿ ಬಿ ಬರುವಾ ಅವರು ನ್ಯಾಯದೀಶ ಹುದ್ದೆಗೆ ನೇಮಕವಾಗಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸ್ವಾತಿ ಬಿ ಬರುವಾ, ” ಈ ಹಂತಕ್ಕೆ ಬರಲು ತೃತೀಯ ಲಿಂಗಿಗಳಿಗೆ ಸಾಕಷ್ಟು ಎಡರು ತೊಡರುಗಳಿವೆ. ತಾರತಮ್ಯ ಮಾಡಲಾಗುತ್ತದೆ. ಸಮಾಜ ತೃತೀಯ ಲಿಂಗಿಗಳು ಒಪ್ಪಿಕೊಳ್ಳಲು ಇಂಥ ಘಟನೆಗಳು ಮೈಲುಗಲ್ಲಾಗಲಿವೆ,” ಎಂದು ಹೇಳಿದ್ದಾರೆ.

Comments are closed.