ಕರ್ನಾಟಕ

ಮಂಡ್ಯದ 40 ಮನೆಗಳಿಗೆ ಸೌರ ಶಕ್ತಿಯಿಂದ ಬೆಳಗಿದ ನಟಿ ಆಲಿಯಾ ಭಟ್ !

Pinterest LinkedIn Tumblr

ಮುಂಬೈ: ಸ್ಯಾಂಡಲ್ ವುಡ್, ಬಾಲಿವುಡ್ ಕೆಲವು ನಟ ನಟಿಯರು ಬಡ ಜನರಿಗೆ ತಮ್ಮ ಕೈಲಾದಷ್ಟು ಸಹಾಯ ನೀಡುವ ಮೂಲಕ ಬೇರೆಯವರಿಗೆ ಮಾದರಿಯಾಗುತ್ತಾರೆ. ಇದೇ ಸಾಲಿನಲ್ಲಿ ಸೇರ್ಪಡೆಯಾಗಿರುವ ಹೊಸ ಹೆಸರು ಆಲಿಯಾ ಭಟ್.

ಬಾಲಿವುಡ್ ನಟಿ ಆಲಿಯಾ ಭಟ್ ಕರ್ನಾಟಕದ ಮಂಡ್ಯ ಜಿಲ್ಲೆಯ ಗ್ರಾಮವೊಂದಕ್ಕೆ ವಿದ್ಯುತ್ ಒದಗಿಸುವ ಮೂಲಕ ಗಮನ ಸೆಳೆದಿದ್ದಾರೆ.

ಮಂಡ್ಯದ ಕಿಕ್ಕೇರಿ ಗ್ರಾಮದ 40 ಕುಟುಂಬಗಳಿಗೆ ಆಲಿಯಾ ಭಟ್ ಸೋಲಾರ್ ದೀಪಗಳನ್ನು ಒದಗಿಸುವ ಕೆಲಸ ಮಾಡಿದ್ದಾರೆ. ಈ ವರ್ಷ ಪ್ರಾರಂಭಗೊಂಡ `ಮಿ ವಾರ್ಡ್ ರೋಬ್ ಈಸ್ ಸು ವಾರ್ಡ್ ರೋಬ್’ ಸ್ಟೈಲ್ಕ್ರಾಕರ್ ನೈಟ್ ಮಾರ್ಕೆಟ್ ಅಭಿಯಾನದಲ್ಲಿ ಆಲಿಯಾ ಭಟ್ ತಮ್ಮ ವಿಶೇಷ ಉಡುಪೊಂದನ್ನು ಮಾರಾಟಕ್ಕೆ ಇಟ್ಟಿದ್ದರು. ಈ ಉಡುಪಿನ ಮಾರಾಟದಿಂದ ಬಂದ ಹಣವನ್ನು ಅವರು ಬೆಂಗಳೂರು ಮೂಲದ ಎಆರ್ ಓಎಚ್‍ಎ ಸಂಸ್ಥೆಯೊಂದು ಆಯೋಜಿಸಿದ್ದ `ಲಿಟರ್ ದ ಲೈಟರ್’ ಕಾರ್ಯಕ್ರಮದಲ್ಲಿ ತೊಡಗಿಸಿದ್ದಾರೆ.

ಎಆರ್ ಓಎಚ್‍ಎ ಸಂಸ್ಥೆ ಪ್ಲಾಸ್ಟಿಕ್ ಬಾಟಲ್‍ಗಳನ್ನ ಮರುಬಳಕೆ ಮಾಡಿ ವಿದ್ಯುತ್ ಇಲ್ಲದ ಹಳ್ಳಿಗಳಿಗೆ ಸೋಲಾರ್ ದೀಪವನ್ನು ಒದಗಿಸುವ ಕಾರ್ಯ ಮಾಡುತ್ತಿದ್ದು ಸಂಸ್ಥೆಯು ತಾನು ನಡೆಸುವ `ಲಿಟರ್ ದ ಲೈಟರ್’ ಕಾರ್ಯಕ್ರಮಕ್ಕೆ ಚಾರಿಟಿಯಾಗುವಂತೆ ಆಲಿಯಾ ಅವರಿಗೆ ಆಹ್ವಾನ ನಿಡಿದೆ. ಇದಕ್ಕೆ ಸಮ್ಮತಿಸಿದ ನಟಿ ಮಂಡ್ಯದ 40 ಕುಟುಂಬಗಳಿಗೆ ಈ ಸಂಸ್ಥೆ ಸೋಲಾರ್ ದೀಪಗಳನ್ನು ಒದಗಿಸಿದ್ದಾರೆ.

“ಭಾರತದಲ್ಲಿ ಇಂದಿಗೂ ಅನೇಕ ಕುಟುಂಬಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಇಂತಹಾ ಜನರ ಮನೆ ಬೆಳಗಲು ಇದು ಸಮರ್ಪಯ ಯೋಜನೆಯಾಗಿದೆ. ಇದು ಪರಿಸರ ಸ್ನೇಹಿ ಯೋಜನೆ, ಕಿಕ್ಕೇರಿ ಗ್ರಾಮದ 200 ಜನರಿಗೆ ಈ ಯೋಜನೆ ಫಲ ಲಭಿಸಲ್ದೆ” ಆಲಿಯಾ ಭಟ್ ಹೇಳಿದ್ದಾರೆ.

ಮೇಘನಾ ಗುಲ್ಜಾರ್ ಅವರ `ರಾಜಿ’, ರಣವೀರ್ ಸಿಂಗ್ ಅಭಿನಯದ `ಜೊಯಾ ಅಖ್ತರ್ ಗಲ್ಲಿ ಬಾಯ್’ ಚಿತ್ರಗಳಲ್ಲಿ ನಟಿಸುತ್ತಿಉವ ನಟಿ ಆಲಿಯಾ ಅಯನ್ ಮುಖರ್ಜಿಯವರ `ಬ್ರಹ್ಮಸ್ತರ’ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ

Comments are closed.