ಕರ್ನಾಟಕ

2ನೇ ಮದುವೆಗಾಗಿ ಎಲ್​ಐಸಿ ಬಾಂಡ್ ಎಂದು ವಿಚ್ಛೇದನ ಪತ್ರಕ್ಕೆ ಸಹಿ ಹಾಕಿಸಿಕೊಂಡ ಹೆಡ್​ ಕಾನ್ಸ್​ಟೆಬಲ್​!

Pinterest LinkedIn Tumblr


ಮೈಸೂರು: ಎಲ್​ಐಸಿ ಬಾಂಡ್​ ಎಂದು ಪತ್ನಿಯಿಂದ ವಿಚ್ಛೇದನ ಪತ್ರಕ್ಕೆ ಸಹಿ ಹಾಕಿಸಿಕೊಂಡ ಪೊಲೀಸ್​ ಹೆಡ್​ ಕಾನ್ಸ್​ಟೆಬಲ್​, ಎರಡನೇ ಮದುವೆಯಾಗಿರುವ ಘಟನೆ ನಡೆದಿದೆ.

ಮೈಸೂರಿನ ಯೋಗ ನರಸಿಂಹಸ್ವಾಮಿ ದೇಗುಲದಲ್ಲಿ ಘಟನೆ ನಡೆದಿದ್ದು, ಪೊಲೀಸ್​ ಹೆಡ್​ ಕಾನ್ಸ್​ಟೆಬಲ್ ಆಗಿದ್ದ ಪತಿಯನ್ನು ಮದುವೆ ಮಂಟಪದಿಂದಲೇ ಪತ್ನಿ ಸವಿತಾ ಎಳೆದು ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹುಣಸೂರು ತಾಲೂಕಿನ ಹೊಸಹಳ್ಳಿ ನಿವಾಸಿ ರಾಜಾಚಾರಿಗೆ ಮದುವೆಯಾಗಿ 18 ವರ್ಷವಾಗಿದ್ದು, ಎರಡು ಮಕ್ಕಳಿವೆ. ಆದರೆ, ಈತ ಫೇಸ್​ಬುಕ್​ನಲ್ಲಿ ಪರಿಚಯವಾದ ಮಹಿಳೆಗಾಗಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಪತಿಯ ನಡೆಗೆ ಆಕ್ರೋಶಗೊಂಡ ಮಹಿಳೆ ಎಸ್​ಪಿ ಕಚೇರಿ ಆವರಣದಲ್ಲಿ ಗಂಡನನ್ನು ಎಳೆದಾಡಿ ರಂಪಾಟ ಮಾಡಿದ್ದಾರೆ. ಸದ್ಯ ನಜರ್​ಬಾದ್ ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯಿತಿ ನಡೆಯುತ್ತಿದೆ.

ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯಲ್ಲಿ ರಾಜಾಚಾರಿ ಹೆಡ್ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

Comments are closed.