ರಾಷ್ಟ್ರೀಯ

10ರ ಬಾಲೆಯ ಮೇಲೆ ಅತ್ಯಾಚಾರವೆಸಗಿದ 99ರ ಹರೆಯದ ನಿವೃತ್ತ ಮುಖ್ಯೋಪಾಧ್ಯಯ!

Pinterest LinkedIn Tumblr


ಚೆನ್ನೈ: ಇಲ್ಲಿನ ಅವದಿ ನಿವಾಸಿಯಾದ 99 ಹರೆಯದ ನಿವೃತ್ತ ಮುಖ್ಯೋಪಾಧ್ಯಯನನ್ನು ಹತ್ತರ ಬಾಲೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಚೈನ್ನೈ ಪೊಲೀಸರು ಬಂಧಿಸಿದ್ದಾರೆ.

ತನ್ನ ಮನೆಯ ಸಮೀಪ ಐದು ಮನೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದ್ದ. ಈ ಬಾಲಕಿಯ ಕುಟುಂಬ ಈ ಮನೆಯೊಂದರಲ್ಲಿ ಬಾಡಿಗೆಗೆ ವಾಸವಾಗಿತ್ತು. ಬಾಲಕಿ ತನ್ನ ಪೋಷಕರ ಬಳಿ ಹೊಟ್ಟೆ ನೋವಾಗುತ್ತದೆ ಎಂದು ಹೇಳಿದ ಬಳಿಕ ಮಗಳ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಪೋಷಕರಿಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿಯ ಹೇಳಿಕೆಯನ್ನು ಆಧರಿಸಿ ಆಕೆಯ ತಂದೆ ಮುದುಕ ಪರಶುರಾಮ್ ನನ್ನು ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿದಿದ್ದಾರೆ.

ಪೊಲೀಸರು ಪರಶುರಾಮನನ್ನು ಬಂಧಿಸಿದ್ದು, ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Comments are closed.