ರಾಷ್ಟ್ರೀಯ

ಚಪಾತಿ ಸೀದದ್ದಕ್ಕಾಗಿ ತ್ರಿವಳಿ ತಲಾಖ್‌!

Pinterest LinkedIn Tumblr


ಬಾಂದಾ: ಚಪಾತಿ ಸೀದದ್ದಕ್ಕಾಗಿ ಮನೆಯಿಂದ ಹೊರಹೋಗುವಂತೆ ಒತ್ತಾಯಿಸಿದ ಗಂಡ ‘ತ್ರಿವಳಿ ತಲಾಖ್‌’ ನೀಡಿರುವುದಾಗಿ ಮಹಿಳೆ ಪೊಲೀಸರಿಗೆ ದೂರಿದ್ದಾಳೆ.

ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಪಹ್ರೇತಾ ಗ್ರಾಮದಲ್ಲಿ ಘಟನೆ ನಡೆದಿದ್ದು, 24 ವರ್ಷದ ಮಹಿಳೆ ಭಾನುವಾರ ಗಂಡನ ದೌರ್ಜನ್ಯದ ವಿರುದ್ಧ ಪೊಲೀಸರಿಗೆ ದೂರಿದ್ದಾಳೆ.

ದೂರಿನಲ್ಲಿ ತಿಳಿಸಿರುವಂತೆ, 2017ರಲ್ಲಿ ಆಕೆ ಮದುವೆಯಾಗಿದ್ದಳು. ಅಂದಿನಿಂದಲೂ ಗಂಡ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ. ತ್ರಿವಳಿ ತಲಾಖ್‌ ನೀಡುವ ಮೂರು ದಿನಗಳ ಮುಂಚೆ ಸಿಗರೇಟ್‌ನಿಂದ ಸುಟ್ಟು ಗಾಯಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

2017ರ ಆಗಸ್ಟ್‌ 22ರಂದು ಸುಪ್ರೀಂ ಕೋರ್ಟ್‌ ತ್ರಿವಳಿ ತಲಾಖ್‌ನ್ನು ರದ್ಧುಗೊಳಿಸಿ, ಈ ರೀತಿಯ ಆಚರಣೆಗಳು ಸಾಂವಿಧಾನ ಬಾಹಿರ ಮತ್ತು ಸಂವಿಧಾನದ ವಿಧಿ 14ರ ಉಲ್ಲಂಘನೆಯಾಗುತ್ತದೆ ಎಂದು ಹೇಳಿ ಐತಿಹಾಸಿಕ ತೀರ್ಪು ನೀಡಿತ್ತು.

Comments are closed.