ಕರ್ನಾಟಕ

ಮೈಸೂರಿನಲ್ಲಿ ಕಲ್ಯಾಣ ಮಂಟಪದಿಂದ ತನ್ನ ಪ್ರಿಯಕರನೊಡನೆ ಸಿನಿಮೀಯ ಮಾದರಿಯಲ್ಲಿ ಪರಾರಿಯಾದ ವಧು !

Pinterest LinkedIn Tumblr

ಮೈಸೂರು: ಹಸೆಮಣೆ ಏರಬೇಕಾಗಿದ್ದ ವಧು ಕಲ್ಯಾಣ ಮಂಟಪದಿಂದ ತನ್ನ ಪ್ರಿಯಕರನೊಡನೆ ಸಿನಿಮೀಯ ಮಾದರಿಯಲ್ಲಿ ಪರಾರಿಯಾದ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಶ್ರೀಕಂಠೇಶ್ವರ ಕಲ್ಯಾಣ ಮಂಟಪದಿಂದ ಮಧುಮಗಳು ಪರಾರಿಯಾಗಿದ್ದು ಎಚ್.ಡಿ ಕೋಟೆ ತಾಲೂಕಿನ ಹೊಸಹಳ್ಳಿ ಗ್ರಾಮದ ಕೃಷ್ಣ ನಾಯಕ್ ಮತ್ತು ತಾಯಮ್ಮ ಎಂಬುವವರ ಪುತ್ರಿ ಕಲ್ಯಾಣ ಮಂಟಪದಿಂದ ತಪ್ಪಿಸಿಕೊಂಡಿದ್ದಾಳೆ.

ತನ್ನ ಪ್ರಿಯಕರನೊಡನೆ ಆಕೆ ಹೊರಟು ಹೋಗಿದ್ದಾಳೆ ಎನ್ನಲಾಗಿದ್ದು ಭಾನುವಾರ ನೆರವೇರಬೇಕಿದ್ದ ವಿವಾಹ ಕಾರ್ಯಕ್ಕೆ ಕೆಲ ಕ್ಷಣಗಳ ಮುನ್ನ ಈ ಘಟನೆ ನಡೆದಿದೆ.

ಎಚ್.ಡಿ.ಕೋಟೆ ಹೊಸಹಳ್ಳಿಯ ದಂಪತಿಯ ಪುತ್ರಿ ವಿವಾಹವನ್ನು ಮೈಸೂರು ತಾಲೂಕಿನ ಮಾರ್ಬಳ್ಳಿ ಗ್ರಾಮದ ನಾರಾಯಣ ಎನ್ನುವವನೊಂದಿಗೆ ನಿಶ್ಚಯಿಸಲಾಗಿತ್ತು.

ಮನೆಯವರು ಎಲ್ಲಿ ಹುಡುಕಿದರೂ ವಧು ಸಿಗದೆ ಹೋಗಿದ್ದು ವಧುವಿನ ಮನೆಯವರಿಗೆ ಆಕೆ ತನ್ನ ಪ್ರೀತಿಯ ವಿಚಾರ ತಿಳಿಸಿದ್ದಳು ಆದರೂ ಅವಳ ಪೋಷಕರು ಆಕೆಗೆ ಬಲವಂತದಿಂದ ಬೇರೆ ಮದುವೆ ಮಾಡ ಹೊರಟಿದ್ದರೆಂದು ತಿಳಿದುಬಂದಿದೆ.

ಮಗಳು ನಾಪತ್ತೆಯಾದ ಕಾರಣ ಯುವತಿಯ ಪೋಷಕರು ಕಂಗಾಲಾಗಿದ್ದಾರೆ. ಇದೇ ವೇಳೆ ವಧು ನಾಪತ್ತೆಯಾದ ಕಾರಣ ನಾರಾಯಣ್ ಪೋಷಕರು ಅವರ್ದೇ ಸಂಬಂಧದ ಬೇರೊಬ್ಬ ಯುವತಿಯೊಂದಿಗೆ ಆತನ ವಿವಾಹ ನೆರವೇರಿಸಿದ್ದಾರೆ.

Comments are closed.