ಕರ್ನಾಟಕ

ಬೆಂಗಳೂರಿನಲ್ಲಿ ಪಬ್ ಮೇಲೆ ದಾಳಿ ನಡೆಸಿದ ಪೊಲೀಸರಿಂದ 32 ಯುವತಿಯರ ರಕ್ಷಣೆ; ಆರು ಮಂದಿಯನ್ನು ಬಂಧನ

Pinterest LinkedIn Tumblr

ಬೆಂಗಳೂರು: ಪಬ್ ವೊಂದರ ಮೇಲೆ ದಾಳಿ ನಡೆಸಿದ ಜೀವನ್ ಭೀಮಾ ನಗರ ಪೊಲೀಸರು 32 ಯುವತಿಯರನ್ನು ರಕ್ಷಿಸಿ ಆರು ಮಂದಿಯನ್ನು ಬಂಧಿಸಿದ್ದಾರೆ.

ಡಿಸಿಪಿ ಅಜಯ್‌ ಹಿಲೋರಿ ಅವರ ಸೂಚನೆ ಮೇರೆಗೆ ಮಂಗಳವಾರ ತಡರಾತ್ರಿಯಲ್ಲಿ ಪಬ್‌ ಮೇಲೆ ದಾಳಿ ನಡೆಸಿದ ಪೊಲೀಸರು ಅಶ್ಲೀಲ ನೃತ್ಯದಲ್ಲಿ ತೊಡಗಿದ್ದ ಉತ್ತರ ಭಾರತ ಮೂಲದ ಯುವತಿಯರನ್ನು ರಕ್ಷಿಸಿ ಇವರಿಂದ ಬಲವಂತವಾಗಿ ನೃತ್ಯ ಮಾಡಿಸುತ್ತಿದ್ದ ಆರೋಪದ ಮೇರೆಗೆ ಮ್ಯಾನೇಜರ್‌ ಸೇರಿ ಆರು ಸಿಬ್ಬಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ.

ಲೇಡಿಸ್‌ ಬಾರ್‌ ಹೆಸರಿನಲ್ಲಿ ಪಬ್‌ ಲೈಸೆನ್ಸ್‌ ಪಡೆದು ಅನಧಿಕೃತವಾಗಿ ಲೈವ್‌ಬ್ಯಾಂಡ್‌ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ಜೆಬಿ ನಗರ ಠಾಣೆ ಪೊಲೀಸರಿಗೆ ಸೂಚನೆ ಸಿಕ್ಕಿತ್ತು.

ಮಹಿಳಾ ಸಿಬ್ಬಂದಿ ಜತೆ ದಾಳಿ ನಡೆಸಿದ ಪೊಲೀಸರು ಅಶ್ಲೀಲವಾಗಿ ಉಡುಪು ಧರಿಸಿ ನೃತ್ಯದಲ್ಲಿ ತೊಡಗಿದ್ದ ಬಿಹಾರ, ಗುಜರಾತ್‌, ಮಹಾರಾಷ್ಟ್ರ ಮೂಲದ 32 ಯುವತಿಯರನ್ನು ರಕ್ಷಿಸಿದ್ದಾರೆ.

Comments are closed.