ಕರಾವಳಿ

ನೈಸರ್ಗಿಕವಾಗಿ ಅಂದವಾದ ತುಟಿ ನಿಮ್ಮದಾಗಬೇಕೆ… ಈ ಟಿಪ್ಸ್ ಪಾಲಿಸಿ…

Pinterest LinkedIn Tumblr

ಚಳಿಗಾಲ ಬಂತೆಂದರೆ ಚರ್ಮ ಹೊಡೆಯುವುದು ಮಾತ್ರವಲ್ಲದೆ, ತುಟಿಯೂ ಒಡೆದು ಒರಟೊರಟಾಗುತ್ತದೆ. ಅಲ್ಲದೆ, ನಮ್ಮ ತುಟಿಗಳು ಸಾಮಾನ್ಯವಾಗಿ ಕಪ್ಪು, ಕಂದು ಬಣ್ಣಕ್ಕೆ ತಿರುಗುತ್ತದೆ. ಲಿಪ್ ಸ್ಟಿಕ್ ಹಚ್ಚಿ ತುಟಿ ಬಣ್ಣ ಬರುವಂತೆ ಮಾಡುತ್ತೇವೆ. ಆದರೆ ಇದರಿಂದ ಒರಟುತನ ಮತ್ತಷ್ಟು ಹೆಚ್ಚಾಗುತ್ತದೆ.

ಹಾಗಾದರೆ ಯಾವುದೇ ರಾಸಾಯನಿಕಗಳನ್ನು ಬಳಸದೆ ತುಟಿಗಳಿಗೆ ಅಂದವಾದ ಬಣ್ಣ ಬರುವ ಹಾಗೆ ಮಾಡುವುದು ಹೇಗೆ? ಇಲ್ಲಿದೆ ನೋಡಿ ಕೆಲವು ಟಿಪ್ಸ್!

ಬೀಟ್ ರೂಟ್:
ಒಂದು ತುಂಡು ಬೀಟ್ ರೂಟ್ ತುರಿದು ಹಿಂಡಿ ರಸ ತೆಗೆದು, ಈ ರಸವನ್ನು ಫ್ರಿಡ್ಜ್ ನಲ್ಲಿಟ್ಟು ಗಟ್ಟಿಯಾಗುವಂತೆ ಮಾಡಬೇಕು.
ಅದಕ್ಕೆ 1/4 ಚಮಚ ಗ್ಲಿಸರಿನ್ ಸೇರಿಸಿ ತುಟಿಗೆ ಹಚ್ಚ್ಚಿಕೊಳ್ಳಬೇಕು.

ಇದು ಲಿಪ್ಸ್ ಸ್ಟಿಕ್ ರೀತಿಯೇ ಬಣ್ಣ ಕೊಡುವುದರಿಂದ ರಾಸಾಯನಿಕಗಳಿಂದ ತಯಾರಿಸಲಾಗುವ ಲಿಪ್ಸ್ ಸ್ಟಿಕ್ ಬದಲಾಗಿ ಇದನ್ನೇ ತುಟಿಗೆ ಹಚ್ಚಿಕೊಳ್ಳಬಹುದು. ನಿಯಮಿತವಾಗಿ ಇದನ್ನು ಬಳಸುತ್ತಿದ್ದಾರೆ ತುಟಿಗಳು ಗುಲಾಬಿ ವರ್ಣಕ್ಕೆ ತಿರುಗುತ್ತದೆ.

ಬೆಣ್ಣೆ ಮತ್ತು ಜೇನುತುಪ್ಪ:
ಬೆಣ್ಣೆ ಹಾಗೂ ಜೇನುತುಪ್ಪವನ್ನು ಮಿಶ್ರಣ ಮಾಡಿ ಈ ಪೇಸ್ಟ್ ಅನ್ನು ರಾತ್ರಿ ಮಲಗುವ ಮುನ್ನ ತುಟಿಗಳಿಗೆ ಹಚ್ಚಿಕೊಳ್ಳಬೇಕು.
ಬೆಳಗ್ಗೆ ತಣ್ಣೀರಿನಿಂದ ತೊಳೆಯಬೇಕು. ಇದು ತುಟಿಗಳು ಬಿರುಕು ಬಿಡುವುದನ್ನು ತಡೆಯುವುದಲ್ಲದೆ, ತುಟಿಯ ಸೋಂಕನ್ನೂ ನಿವಾರಿಸುತ್ತದೆ.

ಆಲಿವ್ ಎಣ್ಣೆ:
ಒಂದು ಚಮಚ ಆಲಿವ್ ಎಣ್ಣೆ ಮತ್ತು ಒಂದು ಚಮಚ ಸಕ್ಕರೆ ಬೆರೆಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಬೇಕು.ಈ ಮಿಶ್ರಣವನ್ನು ಪ್ರತಿನಿತ್ಯ ತುಟಿಗಳಿಗೆ ಹಚ್ಚಿಕೊಳ್ಳಬೇಕು. ಸುಮಾರು ಹದಿನೈದು ನಿಮಷ ಬಿಟ್ಟು ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಬೇಕು.
ಇದು ತುಟಿಗಳ ಸುತ್ತವಿರುವ ಡೆಡ್ ಸ್ಕಿನ್ ನಿರ್ಮೂಲನೆ ಮಾಡಲು ನೆರವಾಗುತ್ತದೆ. ಬಳಿಕ ಗುಣಮಟ್ಟದ ಲಿಪ್ ಬಾಮ್ ಹಚ್ಚಿಕೊಳ್ಳಬೇಕು.

Comments are closed.