ಕರ್ನಾಟಕ

ಜೆಡಿಎಸ್ ಪ್ರಣಾಳಿಕೆಯಲ್ಲಿನ ಸಾಲಮನ್ನಾ ಘೋಷಣೆ ಬಗ್ಗೆ ಏನ್ ಮಾಡ್ತೀರಿ: ಯಡಿಯೂರಪ್ಪ ಪ್ರಶ್ನೆ

Pinterest LinkedIn Tumblr


ಬೆಂಗಳೂರು: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಸಾಲಮನ್ನಾ ಮಾಡಲು ನಿರ್ಧರಿಸಿದ್ದೆ, ಆದರೆ ಅದಕ್ಕೆ ಅಡ್ಡಿಪಡಿಸಿದ್ದು ಎಚ್.ಡಿ.ಕುಮಾರಸ್ವಾಮಿ. ಆದರೆ ಈಗ ನೀವೇನ್ ಮಾಡುತ್ತಿದ್ದೀರಿ? ಒಂದು ವೇಳೆ ಬಜೆಟ್ ನಲ್ಲಿ ರೈತರ ಸಾಲಮನ್ನಾ ಘೋಷಣೆ ಮಾಡದಿದ್ದರೆ ಜುಲೈ 12ರಿಂದ ರಾಜ್ಯಾದ್ಯಂತ ಹೇಳಿದ್ದೇನು, ಮಾಡಿದ್ದೇನು ಘೋಷಣೆಯಡಿ ಪ್ರವಾಸ ಕೈಗೊಳ್ಳುವುದಾಗಿ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆಯ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ವಿಷಯ ಪ್ರಸ್ತಾಪಿಸಿ ಅವರು ಮಾತನಾಡಿದರು.

ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಹಣಕಾಸು ಸಚಿವನಾಗಿದ್ದಾಗ ಸಾಲಮನ್ನಾ ತೀರ್ಮಾನ ಕೈಗೊಂಡಿದ್ದೆ. ಆದರೆ ಅದಕ್ಕೆ ಬಲವಾಗಿ ಅಡ್ಡಿಪಡಿಸಿದವರು ಕುಮಾರಸ್ವಾಮಿ ಎಂದು ವಾಗ್ದಾಳಿ ನಡೆಸಿದರು.

ಏತನ್ಮಧ್ಯೆ ಮಧ್ಯೆ ಪ್ರವೇಶಿಸಿದ ಸಿಎಂ ಕುಮಾರಸ್ವಾಮಿ ನಾನು ಅದಕ್ಕೆ ಅಡ್ಡಿಪಡಿಸಿಲ್ಲ ಎಂದು ಸಮಜಾಯಿಷಿ ನೀಡಲು ಹೋದಾಗ ನನ್ನಲ್ಲಿ ನೀವು ಅಂದು ಹೇಳಿರುವ ಎಲ್ಲಾ ದಾಖಲೆ ಇದೆ ಎಂದು ತಿರುಗೇಟು ನೀಡಿದರು.

ಕಲಾಪದಲ್ಲಿ ಜೆಡಿಎಸ್ ಪ್ರಣಾಳಿಕೆಯನ್ನು ಓದಿದ ಯಡಿಯೂರಪ್ಪ, 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ತಿಂಗಳಿಗೆ ಆರು ಸಾವಿರ ರೂಪಾಯಿ ಪಿಂಚಣಿ ಕೊಡುವುದಾಗಿ ಹೇಳಿದ್ದೀರಿ..ಏನ್ ಮಾಡ್ತೀರಾ ಹೇಳಿ.ಹೀಗೆ ಹಲವು ಘೋಷಣೆ ಮಾಡಿದ್ದೀರಿ. ಸಿಎಂ ಹೇಳಿದ್ದನ್ನೆಲ್ಲಾ ಮಾಡಿದರೆ ನಾವೇ ಅವರಿಗೆ ಜೈಕಾರ ಹಾಕುತ್ತೇವೆ. ಒಂದು ವೇಳೆ ಬಜೆಟ್ ನಲ್ಲಿ ಘೋಷಿಸದಿದ್ದರೆ ರಾಜ್ಯಾದ್ಯಂತ ಹೇಳಿದ್ದೇನು, ಮಾಡಿದ್ದೇನು ಎಂಬ ಸ್ಲೋಗನ್ ಮೂಲಕ ಪ್ರವಾಸ ಕೈಗೊಳ್ಳುವುದಾಗಿ ಹೇಳಿದರು.

ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ಈಗಲೇ ಬಜೆಟ್ ಭಾಷಣ ಮಾಡುತ್ತಿದ್ದೀರಾ ಹೇಗೆ ಎಂದು ಪ್ರಶ್ನಿಸಿದಾಗ..ಇದು ಜೆಡಿಎಸ್ ಪ್ರಣಾಳಿಕೆ ಇದರ ಬಗ್ಗೆ ಮಾತನಾಡುತ್ತಿದ್ದೇನೆ ಎಂದರು.

Comments are closed.