ಕರಾವಳಿ

ಕುಖ್ಯಾತ ದನಗಳ್ಳನನ್ನು ಬಂಧಿಸಿದ ಮಂಗಳೂರು ರೌಡಿನಿಗ್ರಹದಳದ ಪೊಲೀಸರು

Pinterest LinkedIn Tumblr

ಮಂಗಳೂರು, ಜುಲೈ.03: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಇತರ ಕಡೆಗಳಲ್ಲಿ ಸಕ್ರಿಯವಾಗಿದ್ದ ದನಗಳ್ಳತನದ ಜಾಲವನ್ನು ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ರೌಡಿನಿಗ್ರಹ ದಳದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕುಖ್ಯಾತ ದನಗಳ್ಳನನ್ನು ಬಂಧಿಸಲಾಗಿದೆ. 2017 ರ ನವೆಂಬರ್ 18ರಂದು ನಡೆದಿದ್ದ ಗೋಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಬಂಧಿತನನ್ನು ಮಂಗಳೂರು ತಾಲೂಕಿನ ಮಲ್ಲೂರು ಉದ್ದಬೆಟ್ಟು ಗುಡ್ಡದಮೇಲ್ ಮನೆ ನಿವಾಸಿ ಮಹಮ್ಮದ್ ಮುಸ್ತಫಾ(20) ಎಂದು ಗುರುತಿಸಲಾಗಿದೆ.

2017 ನವೆಂಬರ್ 18ರಂದು ಮಂಗಳೂರು ಹೊರವಲಯದ ಮಲ್ಲೂರು ಗ್ರಾಮದ ಪಲ್ಲಿಬೆಟ್ಟು ಮಸೀದಿಯ ಬಳಿ ನಿಯಮ ಮೀರಿ ದನ-ಕರುಗಳನ್ನು ಸಾಗಾಟ ಮಾಡುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಈ ಸಂದರ್ಭದಲ್ಲಿ ಪೊಲೀಸರು ಸುತ್ತುವರೆಯುತ್ತಿರುವದನ್ನು ಗಮನಿಸಿದ ಇಮ್ರಾನ್, ನಿಜಾಮುದ್ದೀನ್, ಮುಸ್ತಾಪಾ ಹಾಗೂ ಫೌಝಾನ್ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು.

ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಮಹಮ್ಮದ್ ಮುಸ್ತಫಾನನ್ನು ಬಂಧಿಸುವಲ್ಲಿ ರೌಡಿನಿಗ್ರಹದಳದ ಪೊಲೀಸರು ಯಶಸ್ವಿ ಯಾಗಿದ್ದಾರೆ.  ತಂಡದ ಇತರ ಸದಸ್ಯರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Comments are closed.