ಕರ್ನಾಟಕ

6 ತಿಂಗಳಲ್ಲಿ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ!

Pinterest LinkedIn Tumblr


ಬೆಳಗಾವಿ: ಇನ್ನು 6 ತಿಂಗಳೊಳಗೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ನಿಶ್ಚಿತ. 6 ತಿಂಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ ಕಾದು ನೋಡಿ ಎಂದು ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಹೊಸ ಬಾಂಬ್ ಸಿಡಿಸಿದ್ದಾರೆ.

ಹಿರಣ್ಯಕೇಶಿ ನದಿಯಿಂದ ಕೆರೆ ತುಂಬುವ ಯೋಜನೆಗೆ ಚಾಲನೆ ನೀಡಿದ ಬಳಿಕ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಮಾತನಾಡಿದ ಅವರು, ಬಿಜೆಪಿಯ ಯಾವುದೇ ಶಾಸಕರೂ ಕಾಂಗ್ರೆಸ್​ ಸಂಪರ್ಕದಲ್ಲಿಲ್ಲ. ಬಿಜೆಪಿಯ ಯಾವುದೇ ಶಾಸಕರೂ ಸಚಿವ ರಮೇಶ್​ ಜಾರಕಿಹೊಳಿ ಸೇರಿ ಯಾವುದೇ ಕಾಂಗ್ರೆಸ್​​ ನಾಯಕರ ಸಂಪರ್ಕದಲ್ಲಿಲ್ಲ ಎಂದು ಹೇಳಿದರು.

ಬಜೆಟ್​​ನಲ್ಲಿ ಸಿಎಂ ಕುಮಾರಸ್ವಾಮಿಯಿಂದ ರೈತರ ಸಾಲಮನ್ನಾ ವಿಚಾರಕ್ಕೆ ಪ್ರತಿಕ್ರಿಯಿಸಿ, ರೈತರ ಬೆಳೆ ಸಾಲವನ್ನು ಮಾತ್ರ ಮುಖ್ಯಮಂತ್ರಿಗಳು ಮನ್ನಾ ಮಾಡುವವರಿದ್ದಾರೆ. ಆದರೆ, ಎಚ್​ಡಿಕೆ ಈ ಬಾರಿಯೂ ವಚನ ಭ್ರಷ್ಟ ಆಗದೆ ನುಡಿದಂತೆ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

Comments are closed.