
ದಾವಣಗೆರೆ: ನಾಗರ ಹಾವಿನ ದ್ವೇಷದ ಬಗ್ಗೆ ಅದೆಷ್ಟೋ ಕತೆಗಳಿವೆ. ಹಾಗೇ ಇಲ್ಲೊಬ್ಬಳು ಹಾವಿನ ದ್ವೇಷಕ್ಕೆ ತುತ್ತಾಗಿದ್ದು ಆರುದಿನದಲ್ಲಿ ಮೂರು ಬಾರಿ ಹಾವಿನಿಂದ ಕಡಿತಕ್ಕೆ ಒಳಗಾಗಿದ್ದಾಳೆ.
ಹರಿಹರ ಪಟ್ಟಣದ ಜೆ.ಸಿ.ಬಡಾವಣೆಯಲ್ಲಿ ಕಮರಿನ್ ತಾಜ್ ಕೆಲವು ತಿಂಗಳ ಹಿಂದೆ ಮನೆ ಹಿಂದೆ ಬಂದಿದ್ದ ಹಾವಿಗೆ ಹೊಡೆದು ಪೆಟ್ಟು ಮಾಡಿದ್ದಳು. ಈಗ ಆ ಹಾವು ಕಮರಿನ್ ಬೆನ್ನತ್ತಿದೆ. ಎರಡೆರಡು ದಿನಕ್ಕೊಮ್ಮೆ ಬಿಟ್ಟು ಬಿಡದೆ ಕಚ್ಚುತ್ತಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಕುಕ್ಕೆ ಸುಬ್ರಹ್ಮಣ್ಯ ಹಾಗೂ ದರ್ಗಾಗಳಿಗೆ ಮೊರೆ ಹೋಗಿದ್ದಾರೆ.
Comments are closed.