ರಾಷ್ಟ್ರೀಯ

ಮಿರ್ಪುರ್‌ ಪಶ್ಚಿಮ ಬಂಗಾಲದಲ್ಲೊಂದು ಪೋರ್ಚುಗೀಸ್‌ ಗ್ರಾಮ!

Pinterest LinkedIn Tumblr


ಕೋಲ್ಕತಾ: ಇದು ಕೋಲ್ಕತಾದಿಂದ 150 ಕಿ.ಮೀ. ದೂರದಲ್ಲಿರುವ ಕುಗ್ರಾಮ, ಮಿರ್ಪುರ್‌ (ಬಾಂಗ್ಲಾದೇಶದ್ದಲ್ಲ). ಟಾರು ಕಾಣದ ರಸ್ತೆ, ಸಿಮೆಂಟ್‌ ಕಾಣದ ಗೋಡೆ, ಆಸ್ಪತ್ರೆಗೆ ಹೋಗಬೇಕಾದರೆ 3 ಕಿ.ಮೀ. ದೂರ, ಹತ್ತಿರದ ಬಸ್ಸು ನಿಲ್ದಾಣಕ್ಕೆ 5 ಕಿ.ಮೀ. ನಡೆಯಬೇಕಾದ ಸ್ಥಿತಿ… ಹೀಗೆ ಸಾಗುತ್ತದೆ ಮಿರ್ಪುರ್‌ ಚಿತ್ರಣ.

ಕಳೆದೊಂದು ತಿಂಗಳಿಂದ ಇದು ಸಂಪೂರ್ಣ “ಪೋರ್ಚುಗೀಸ್‌ ಗ್ರಾಮ’ವಾಗಿ ಬದಲಾಗಿದೆ. ಕಾರಣ ವಿಶ್ವಕಪ್‌ ಫ‌ುಟ್‌ಬಾಲ್‌ ಜ್ವರ!
ಹೌದು, ಇಲ್ಲಿನ ಜನರ ಫ‌ುಟ್‌ಬಾಲ್‌ ಪ್ರೀತಿ ಅಪಾರ. ವಿಶೇಷವೆಂದರೆ ಇವರೆಲ್ಲರೂ ಸ್ಟಾರ್‌ ಆಟಗಾರ ರೊನಾಲ್ಡೊ ಹಾಗೂ ಪೋರ್ಚುಗಲ್‌ ತಂಡದ ಕಟ್ಟಾ ಅಭಿಮಾನಿಗಳು. ಇಲ್ಲಿ ಪೋರ್ಚುಗಲ್‌ ಹೊರತುಪಡಿಸಿ ಬೇರೆ ಯಾವುದೇ ತಂಡದ ಒಬ್ಬನೇ ಒಬ್ಬ ಫ‌ುಟ್‌ಬಾಲ್‌ ಪ್ರೇಮಿ ಇಲ್ಲ!

ಪೋರ್ಚುಗಲ್‌ ಪಂದ್ಯ ಇರುವಾಗಲೆಲ್ಲ ಇಲ್ಲಿ ಆ ದೇಶದ ಧ್ವಜ ಅರಳುತ್ತದೆ. ಅಂದು ಇಡೀ ಊರಿಗೇ ಹಬ್ಬ. ಆದರೆ ಈ ಪಂದ್ಯವನ್ನು ವೀಕ್ಷಿಸಲು ಇರುವ ಟೆಲಿವಿಷನ್‌ಗಳ ಸಂಖ್ಯೆ ಒಂದೋ ಎರಡೋ.

ಇವರ್ಯಾರೂ ಪೋರ್ಚುಗೀಸ್‌ ಭಾಷೆ ಮಾತಾಡರು. ಆ ದೂರದ ದೇಶವನ್ನು ಕಂಡೇ ಇಲ್ಲ. ಎಲ್ಲರೂ ಮಾತಾಡುವುದು ಬಂಗಾಲಿಯಲ್ಲೇ. “ರೊನಾಲ್ಡೊ ಸೂಪರ್‌ ಫಾರ್ಮ್ನಲ್ಲಿದ್ದಾರೆ. ಅವರು ಸ್ಪೇನ್‌ ವಿರುದ್ಧ ಹೇಗೆ 3 ಗೋಲು ಬಾರಿಸಿದರೆಂಬುದನ್ನು ನೋಡಿದಿರಾ? ಈ ಸಲ ರೊನಾಲ್ಡೊ ತಂಡವೇ ಕಪ್‌ ಎತ್ತುವುದು. ಈ ಬಗ್ಗೆ ನಮಗೆಲ್ಲ ಸಂಪೂರ್ಣ ನಂಬಿಕೆ ಇದೆ’ ಎನ್ನುತ್ತಾರೆ ಹೈಸ್ಕೂಲ್‌ ವಿದ್ಯಾರ್ಥಿ ಸುಮನ್‌ ಪೆರೆರ. ಪೋರ್ಚುಗೀಸ್‌ ಧ್ವಜ ತರಬೇಕಾದರೆ ಇವರು ಕೋಲ್ಕತಾಕ್ಕೇ ಹೋಗಬೇಕು.

Comments are closed.