ಕರ್ನಾಟಕ

ಕೈಕೊಟ್ಟ ಪ್ರಿಯತಮ, ಆತ್ಮಹತ್ಯೆ ಮಾಡಿಕೊಂಡ ಯುವತಿ

Pinterest LinkedIn Tumblr


ಬೆಂಗಳೂರು: ವಿವಾಹವಾಗಲು ಪ್ರಿಯತಮ ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತಪುರದಲ್ಲಿ ಬುಧವಾರ ನಡೆದಿದೆ.

ಸುಪ್ರಿಯಾ ಮೃತ ದುರ್ದೈವಿ. ಶರತ್​ ಮತ್ತು ಸುಪ್ರಿಯಾ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಶರತ್ ಮಂಗಳವಾರ ದೂರವಾಣಿ ಕರೆ ಮಾಡಿ ವಿವಾಹವಾಗಲು ನಿರಾಕರಿಸಿದ್ದಾನೆ.

ಶರತ್​ ತಾನು ಬೇರೆ ಯುವತಿ ಜತೆ ವಿವಾಹವಾಗುವುದಾಗಿ ತಿಳಿಸಿದ್ದರಿಂದ ಬೇಸತ್ತ ಸುಪ್ರಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಿಡಕ್ಕೆ ಕ್ರಿಮಿನಾಶಕ ತರುತ್ತೇನೆಂದು ಹೋಗಿದ್ದಳು
ಸುಪ್ರಿಯಾ ನಿನ್ನೆ ಸಂಜೆ ಗುಲಾಬಿ ಗಿಡಕ್ಕೆ ಕ್ರಿಮಿನಾಶಕ ತರುತ್ತೇನೆಂದು ಹೋಗಿದ್ದಳು. ಬಳಿಕ ಕ್ರಿಮಿನಾಶಕ ತಂದು ಕೂಲ್ ಡ್ರಿಂಕ್ಸ್ ಜತೆ ಬೆರೆಸಿ ಕುಡಿದಿದ್ದಳು. ತಾಯಿಯೊಂದಿಗೆ ವಿಷಯ ಹೇಳಲಾಗದೆ ಮೊಬೈಲ್​ನಲ್ಲಿ ಆಡಿಯೋ ರೆಕಾರ್ಡ್ ಮಾಡಿ ನಿನ್ನೆ ಸಂಜೆ ಟೆರೇಸ್​​ಗೆ ಹೋಗಿ ವಿಷ ಸೇವಿಸಿದ್ದಳು. ತಡರಾತ್ರಿಯವರೆಗೂ‌ ಮಗಳು ಬದುಕಿ ಬರಲೆಂದು ಪಾಲಕರು ಕಣ್ಣೀರಿಟ್ಟಿದ್ದರು.

ಶರತ್​ಗೆ ಥಳಿತ
ಸುಪ್ರಿಯಾ ಮೃತಪಟ್ಟ ಬಳಿಕ ಶರತ್​​ಗಾಗಿ ಪೊಲೀಸರ ಶೋಧಿಸುತ್ತಿದ್ದರು. ಕೊನೆಗೆ ಶರತ್​ ಮನೆಗೆ ತೆರಳಿ ಆತನನ್ನು ಎಳೆದುಕೊಂಡು ಬಂದ ಸುಪ್ರಿಯಾ ಪಾಲಕರು ಹಾಗೂ ಸ್ಥಳೀಯರು ಸೇರಿ ಶರತ್​​ಗೆ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

Comments are closed.