ಕರ್ನಾಟಕ

ಹಜ್​ ಭವನಕ್ಕೆ ಟಿಪ್ಪು ಹೆಸರು ನಾನು ಸೂಚಿಸಿಲ್ಲ, ಕಲಾಂ ಹೆಸರು ಕುರಿತು ಚರ್ಚಿಸುತ್ತೇವೆ: ಜಮೀರ್

Pinterest LinkedIn Tumblr


ಬೆಂಗಳೂರು: ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ನಾನು ಸೂಚಿಸಿಲ್ಲ ಎಂದು ಸಚಿವ ಜಮೀರ್​ ಅಹಮ್ಮದ್​ ಹೇಳಿದ್ದಾರೆ. ಜಮೀರ್​ ಅಹಮ್ಮದ್​ ಮತ್ತು ಖಾದರ್ ಅವರ ನೇತೃತ್ವದಲ್ಲಿ ಜೆಡಿಎಸ್​ ಶಾಸಕರನ್ನು ಒಳಗೊಂಡತೆ ಅಲ್ಪ ಸಂಖ್ಯಾತರ ಸಭೆ ನಡೆಯಿತು. ಬಳಿಕ ಮಾತಾಡಿದ ಸಚಿವ ಜಮೀರ್​ ಅಹಮ್ಮದ್​ ಅವರು, ಮುಖ್ಯ ಮಂತ್ರಿಗಳು ಹೊಸ ಬಜೆಟ್ ಮಂಡನೆ ಮಾಡ್ತಿದ್ದಾರೆ. ಹೀಗಾಗಿ ಬಜೆಟ್​ನಲ್ಲಿ ನಮ್ಮ ಇಲಾಖೆ ಮತ್ತು ವಕ್ಫ್ ಬೋರ್ಡ್‌ ಗೆ ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಇದೆ ವೇಳೆ ರೈತರ ಸಾಲ ಮನ್ನಾ ಕುರಿತು ಪ್ರತಿಕ್ರಿಯಿಸಿದ ಜಮೀರ್​ ಅವರು, ಸಿಎಂ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಲು ನಿರ್ಧರಿಸಿದ್ದಾರೆ. ಎಷ್ಟು ಮನ್ನಾ ಮಾಡಲಿದ್ದಾರೆ ಎಂದು ಗೊತ್ತಿಲ್ಲ. ಆದರೆ ನಮ್ಮ ಬೇಡಿಕೆ ಕೂಡಾ ಈಡೇರಿಸುತ್ತಾರೆ ಅನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಹಜ್ ಭವನಕ್ಕೆ ಟಿಪ್ಪು ಹೆಸರಿಡಲು ನಾನು ಹೇಳಿಲ್ಲ. ಜನರಿಂದ ಮನವಿ ಬಂದಿದೆ ಅಂತಷ್ಟೇ ಹೇಳಿದ್ದೆ. ಆದರೆ ಇದರ ಕುರಿತಾಗಿ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆ ಮಾಡಲಾಯಿತು. ಯಡಿಯೂರಪ್ಪ ಅಬ್ದುಲ್ ಕಲಾಂ ಹೆಸರಿಡಲು ಹೇಳಿದ್ದಾರೆ. ಅವರ ಸಲಹೆಯನ್ನು ನಾನು ಸ್ವೀಕಾರ ಮಾಡುತ್ತೇನೆ. ಅಂತಿಮವಾಗಿ ಯಾರ ಹೆಸರಿಡಬೇಕು ಅನ್ನುವುದರ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ತೇವೆ ಎಂದರು.

Comments are closed.