ಕರ್ನಾಟಕ

ಖಾಸಗಿ ಆಸ್ಪತ್ರೆಯ ವೈದ್ಯೆಯಿಂದ ಗರ್ಭಿಣಿಯ ಕೈ ಕಟ್‌

Pinterest LinkedIn Tumblr


ಬಾಗಲಕೋಟ: ರಕ್ತ ನೀಡುವಾಗ ಖಾಸಗಿ ಆಸ್ಪತ್ರೆಯ ವೈದ್ಯೆ ಮಾಡಿದ ಎಡವಟ್ಟಿನಿಂದ ಗರ್ಭಿಣಿಯ ಕೈಯನ್ನೇ ಕತ್ತರಿಸಬೇಕಾಗಿ ಬಂದಿದೆ. ಐದು ತಿಂಗಳ ಗರ್ಭಿಣಿಗೆ ರಕ್ತ ನೀಡುವಾಗ ಸೂಕ್ತ ಕ್ರಮ ಅನುಸರಿದ ಕಾರಣ ಗುಳ್ಳೆ ಎದ್ದು ಬಾವು ಬಂದಿತ್ತು. ಇದು ನಂಜಾಗಿ ಪರಿಣಮಿಸಿ ಗ್ಯಾಂಗ್ರಿನ್‌ಗೆ ತಿರುಗಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟದ ಕೆರೂಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗರ್ಭಿಣಿಯ ಜೀವ ಉಳಿಸಲು ವೈದ್ಯರು ಕೈ ಕತ್ತರಿಸಿದ್ದಾರೆ.

ಇಳಕಲ್ ನಗರದ ಸಂಜೀವಿನಿ ಶಾವಿ ಆಸ್ಪತ್ರೆಯ ವೈದ್ಯೆ ಶೋಭಾ ಅವರಿಂದ ಈ ಯಡವಟ್ಟು ನಡೆದಿದೆ ಎಂದು ವೈದ್ಯೆ ವಿರುದ್ಧ ಗರ್ಭಿಣಿ ಶಿಲ್ಪಾ ಭಜಂತ್ರಿ ಅವರ ಸಂಬಂಧಿಕರು ದೂರು ಕೊಡಲು ಮುಂದಾಗಿದ್ದಾರೆ.

ಜೂನ್ ಐದರಂದು ಶಿಲ್ಪಾಗೆ ಜ್ವರ ಬಂದಿತ್ತು. ಸಂಜೀವಿನಿ ಶಾವಿ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ ಆರರಂದು ರಕ್ತ ನೀಡಲಾಗಿತ್ತು. ಜೂನ್ ಎಂಟರಂದು ಡಿಸ್ಚಾರ್ಜ್ ಮಾಡಿದ್ದರು. ಮೂರು ತಾಸಿನ ನಂತರ ಕೈ ಬಾವು ಕಾಣಿಸಿಕೊಂಡಿತ್ತು. ವೈದ್ಯರು ಗುಳ್ಳೆ ತೆಗೆಯಲು ಆಪರೇಷನ್ ಮಾಡಿದ್ದರು. ಆಪರೇಷನ್ ಬಳಿಕ‌ ಕೈ ನಂಜಾಗಿತ್ತು.

Comments are closed.