ಕರ್ನಾಟಕ

ಕಾಂಗ್ರೆಸ್ ನಿರ್ಲಕ್ಷ್ಯ ಮಾಡಿದ್ದರಿಂದ ನೊಂದು ಶ್ಯಾಮಪ್ರಸಾದ್ ಜನಸಂಘ ಕಟ್ಟಿದ್ದರು: ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್ ನಾಯಕರ ಕಡೆಗಣನೆಯಿಂದ ನೊಂದು ಡಾ.ಶ್ಯಾಮಪ್ರಸಾದ್ ಮುಖರ್ಜಿ ಜನಸಂಘ ಕಟ್ಟಿದರು, ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರ 65ನೇ ಬಲಿದಾನ ದಿನದ ಅಂಗವಾಗಿ ಭಾರತೀಯ ವಿದ್ಯಾ ಭವನದಲ್ಲಿ, ಸ್ವದೇಶೀ ಸಂಘ ಆಯೋಸಿದ್ದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಶ್ಯಾಮಪ್ರಸಾದ್ ಮುಖರ್ಜಿ ಅವರೊಬ್ಬ ಅಪ್ರತಿಮ ದೇಶಪ್ರೇಮಿ. ಕಾಶ್ಮೀರದ 370ನೇ ವಿಧಿ ರದ್ದಿಗೆ ಹೋರಾಟ ಮಾಡಿದ್ದರು. ಕಾಂಗ್ರೆಸ್‌ನಲ್ಲಿದ್ದರೂ ಅವರನ್ನು ಅಂದಿನ ಕಾಂಗ್ರೆಸ್ ನಾಯಕರು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇದರಿಂದ ನೊಂದ ಅವರು ಅಲ್ಲಿಂದ ಹೊರಬಂದು ಜನಸಂಘ ಕಟ್ಟಿದರು, ಎಂದು ಬಿಎಸ್‌ವೈ ಹೇಳಿದ್ದಾರೆ.

ಹೋರಾಟ ಮಾಡುತ್ತಲೇ ಸಾವಿಗೀಡಾದರೂ ಕೇಂದ್ರ ಸರಕಾರ ಸರಿಯಾಗಿ ಸಮಜಾಯಿಷಿ ನೀಡಲಿಲ್ಲ. ಶ್ಯಾಮಪ್ರಸಾದ್ ತಾಯಿ ನೆಹರೂಗೆ ಪತ್ರ ಬರೆದು ತನಿಖೆಗೆ ಒತ್ತಾಯಿಸಿದರೂ ಸ್ಪಂದನೆ ಸಿಗಲಿಲ್ಲ, ಎಂದವರು ಆರೋಪಿಸಿದ್ದಾರೆ.

ನೆಹರೂಗೆ ಪರ್ಯಾಯವಾಗಿ ಶ್ಯಾಮಪ್ರಸಾದ್ ನಾಯಕರಾಗಿ ಹೊರಹೊಮ್ಮಿದ್ದರು. ಭಾರತೀಯ ಅಖಂಡತೆಗೆ ದುಡಿದಿದ್ದರು. ಬಿಜೆಪಿಗೆ ದಾರಿದೀಪವಾಗಿದ್ದರು. ಅವರ ಆಶಯ ಈಡೇರಿಸಲು ನಾವೆಲ್ಲರೂ ಶ್ರಮಿಸಬೇಕಿದೆ. ಅವರ ಚಿಂತನೆ, ರಾಷ್ಟ್ರೀಯತೆ ಬಗ್ಗೆ ಎಲ್ಲರೂ ಅರಿಯಬೇಕಿದೆ. ಕಾಶ್ಮೀರದಲ್ಲಿನ ಭಯೋತ್ಪಾದನೆ ಭಾರತದ ಸಾರ್ವಭೌಮತ್ವಕ್ಕೆ ಸವಾಲು ಒಡ್ಡಿದೆ. ಈ ಸನ್ನಿವೇಶದಲ್ಲಿ ಶ್ಯಾಮಪ್ರಸಾದ ವರ ಆದರ್ಶಗಳು ಪ್ರಸ್ತುತ ಎಂದವರು ಹೇಳಿದ್ದಾರೆ.

Comments are closed.