ರಾಷ್ಟ್ರೀಯ

ನಾಪತ್ತೆಯಾಗಿದ್ದ 42 ಸಾವಿರ ಉತ್ತರಪತ್ರಿಕೆಗಳು ಗುಜರಿ ಅಂಗಡಿಯಲ್ಲಿ ಪತ್ತೆ!

Pinterest LinkedIn Tumblr


ಪಾಟ್ನಾ: ಬಿಹಾರ ಶಾಲಾ ಪರೀಕ್ಷಾ ಮಂಡಳಿಯ ಮೌಲ್ಯಮಾಪನ ಕೇಂದ್ರದಿಂದ ನಾಪತ್ತೆಯಾಗಿದ್ದ 42,500 ಉತ್ತರ ಪತ್ರಿಕೆಗಳು ಕೊನೆಗೂ ಪತ್ತೆಯಾಗಿವೆ. ಅದೂ ಗುಜರಿ ಅಂಗಡಿಯಲ್ಲಿ!

ಗೋಪಾಲ್‌ಗ‌ಂಜ್‌ನ ಶಾಲೆಯೊಂದರಲ್ಲಿ ಇಡಲಾಗಿದ್ದ 10ನೇ ತರಗತಿಯ 42,500 ಉತ್ತರ ಪತ್ರಿಕೆಗಳು ಕಣ್ಮರೆಯಾಗಿದ್ದು ದೇಶಾದ್ಯಂತ ಸುದ್ದಿಯಾಗಿತ್ತು ಮಾತ್ರವಲ್ಲ, ಈ ಹಿನ್ನೆಲೆಯಲ್ಲಿ ಬಿಹಾರ ಸರಕಾರವು ಫ‌ಲಿತಾಂಶವನ್ನೂ ಮುಂದೂಡಿತ್ತು. ಶನಿವಾರ ಗುಜಿರಿ ಅಂಗಡಿಯೊಂದರಲ್ಲಿ ಈ ಉತ್ತರಪತ್ರಿಕೆಗಳು ಪತ್ತೆಯಾಗಿವೆ. ಪ್ರಕರಣ ಸಂಬಂಧ ಗುಜಿರಿ ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತ ತಾನು 8,500 ರೂ.ಗಳನ್ನು ಕೊಟ್ಟು ಇವುಗಳನ್ನು ಖರೀದಿಸಿದ್ದೆ ಎಂದು ಹೇಳಿದ್ದಾನೆ. ಗೋಪಾಲ್‌ಗ‌ಂಜ್‌ ಶಾಲೆಯ ಜವಾನ(ಪಿಯೋನ್‌)ನೇ ತಮಗೆ ಈ ಉತ್ತರಪತ್ರಿಕೆಗಳನ್ನು ಮಾರಾಟ ಮಾಡಿದ್ದ. ಒಂದು ದಿನ ರಾತ್ರಿ ಶಾಲೆಯ ಬಳಿ ಹೋಗಿ ಟೆಂಪೋದಲ್ಲಿ ಇವುಗಳನ್ನು ತಂದೆವು ಎಂದೂ ಆತ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.