ಕರ್ನಾಟಕ

ಉಬರ್ ಚಾಲಕನಿಂದ ಎನ್‌ಆರ್‌ಐಗೆ ಥಳಿತ: ಆರೋಪಿ ಬಂಧನ

Pinterest LinkedIn Tumblr


ಬೆಂಗಳೂರು: ಉಬರ್ ಚಾಲಕ ಹಾಗೂ ಪ್ರಯಾಣಿಕರೊಬ್ಬರ ನಡುವೆ ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆದಿದೆ. ವಾಗ್ವಾದ ತಾರಕಕ್ಕೇರಿ ಚಾಲಕ ಎನ್‌ಆರ್‌ಐ ಮೇಲೆ ಹಲ್ಲೆ ನಡೆಸಿದ್ದು, ದುಬೈ ಮೂಲದ ಎಂಜಿನಿಯರ್ ಆಸ್ಪತ್ರೆಗೆ ಸೇರಿದ್ದಾರೆ.

ಹಲ್ಲೆಗೊಳಗಾದ ಕಮಲ್ ಮೆನನ್ ಹಾಗೂ ಪತ್ನಿ ಎಂ.ಜಿ.ರೋಡಿನಿಂದ ಇಂದಿರಾನಗರ 80 ಅಡಿ ರಸ್ತೆಗೆ ಪ್ರಯಾಣಿಸಲು ಉಬರ್‌ನಲ್ಲಿ ಚಾಲನೆ ಮಾಡಿದ್ದಾರೆ. ಈ ವೇಳೆ, ಇಂದಿರಾನಗರದ ಐದನೇ ಮೇನ್‌ನ ಜಂಕ್ಷನ್ ಬಳಿ ಬಿಡಲು ಉಬರ್ ಚಾಲಕ ರಘುಗೆ ಹೇಳಿದ್ದಾರೆ. ಇದಕ್ಕೆ ಸಿಟ್ಟಾದ ಚಾಲಕ, ಜಿಪಿಎಸ್‌ನಲ್ಲಿ ತೋರಿಸುತ್ತಿರುವ ಸ್ಥಳಕ್ಕೆ ನಿಮ್ಮನ್ನು ಬಿಡುತ್ತೇನೆ ಎಂದು ಹೇಳಿದ್ದಾನೆ. ಆದರೆ, ತಾನು ಪ್ರಯಾಣಿಕ. ನಾನು ಹೇಳಿದ ಕಡೆಗೆ ನೀನು ಬಿಡಬೇಕು ಎಂದು ಎನ್‌ಆರ್‌ಐ ವಾದ ಮಾಡಿದ್ದಾರೆ. ಅಲ್ಲದೆ, ತಾವು ಇಳಿಯಬೇಕಿದ್ದ ಸ್ಥಳ ಹತ್ತಿರ ಬಂದಿದೆ ಎಂದು ಕಾರಿನಿಂದ ಇಳಿಯಲು ಡೋರ್ ಓಪನ್ ಮಾಡಲು ಹೋದಾಗ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆಯುತ್ತದೆ.

ಘಟನೆ ಬಳಿಕ ಸಿಟ್ಟಾದ ಅಪಘಾತಕ್ಕೊಳಗಾದ ಕಾರಿನ ಮಾಲೀಕ, ಪೊಲೀಸರಿಗೆ ದೂರು ಕೊಡುವುದಾಗಿ ಹೇಳಿ ಮೆನನ್‌ರನ್ನು ತಳ್ಳುತ್ತಾನೆ. ಅವರೊಂದಿಗೆ ಸೇರಿಕೊಂಡ ಉಬರ್ ಚಾಲಕ ರಘು ದುಬೈ ಮೂಲದ ಎಂಜಿನಿಯರ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ತನಿಖಾಧಿಕಾರಿ ಮಾಹಿತಿ ನೀಡಿದ್ದಾರೆ. ಕಾರಿನಲ್ಲಿದ್ದ ಪೈಪ್‌ನಿಂದಲೂ ತನ್ನ ಕಾಲಿಗೆ ಹಲ್ಲೆ ನಡೆಸಿದ್ದಾನೆ ಎಂದು ಮೆನನ್ ಪೊಲೀಸರಿಗೆ ಹೇಳಿದ್ದು, ತಾನು ವಾಪಸ್ ಅವನಿಗೆ ಹೊಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ. ಸದ್ಯ, ಮೆನನ್‌ಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಜೂನ್‌ 11 ರಂದು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಶಾಗಿದ್ದು, ಚಾಲಕ ರಘುನನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಕೆಲ ಪುರಾವೆಗಳನ್ನು ಸಹ ದೂರುದಾರರು ನೀಡಿದ್ದಾರೆ. ಇನ್ನು, ಉಬರ್ ಕಂಪನಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪೊಲೀಸ್ ತನಿಖೆಗೆ ಸಹಕಾರ ನೀಡೋದಾಗಿ ಭರವಸೆ ನೀಡಿದ್ದು, ಪೊಲೀಸ್ ತನಿಖೆ ಮುಂದುವರಿದಿದೆ.

Comments are closed.