ಕರ್ನಾಟಕ

ಪೊಲೀಸ್ ಠಾಣೆಗಳಲ್ಲಿ ತಿಂಗಳ ಮಾಮೂಲಿ ವಸೂಲಿ ನಿಲ್ಲಬೇಕು!; ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರು ಶುಕ್ರವಾರ ಹಿರಿಯ ಪೊಲೀಸ್‌ ಅಧಿಕಾರಿಗಳ ಮಹತ್ವದ ಸಭೆ ನಡೆಸಿ ರಾಜ್ಯದ ಕಾನೂನು ಸುವ್ಯವಸ್ಥೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದರು.

ಸಭೆಯಲ್ಲಿ ಸಿಎಂ ಕೆಲ ವಿಚಾರಗಳ ಕುರಿತು ಪೊಲೀಸರಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಠಾಣೆಯಲ್ಲಿ ನಡೆಯುವ ತಿಂಗಳ ವಸೂಲಾತಿ ನಿಲ್ಲಿಸಿ. ಈ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದಿರುವುದಾಗಿ ವರದಿಯಾಗಿದೆ.

ಹುದ್ದೆ ಸೂಚಿಸಿದ ಕಡೆ ಕೆಲಸ ಮಾಡಬೇಕು. ಪದೇ ಪದೇ ವಿಧಾನಸೌಧ ಸುತ್ತುವುದನ್ನು ನಿಲ್ಲಿಸಕು ಎಂದಿರುವುದಾಗಿ ವರದಿಯಾಗಿದೆ.

ಡಿಜಿ ಐಜಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಜಿಲ್ಲೆಯ ಎಸ್‌ಪಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

Comments are closed.