ರಾಷ್ಟ್ರೀಯ

ಪೊಲೀಸ್ ಪೇದೆಯಿಂದ ಕುಟುಂಬ ‘ವೃದ್ಧಿಸಲು’ ರಜೆ ಕೋರಿಕೆ!

Pinterest LinkedIn Tumblr


ಲಖನೌ: ವಿವಿಧ ಕಾರಣ ನೀಡಿ ರಜೆ ಕೋರಿ ಮೇಲಧಿಕಾರಿಗಳಿಗೆ ಬರೆದ ಪತ್ರ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತವೆ. ಉತ್ತರ ಪ್ರದೇಶದಲ್ಲಿ ಕೂಡ ಓರ್ವ ಪೊಲೀಸ್ ಪೇದೆ ಕುಟುಂಬವನ್ನು ವೃದ್ಧಿಸಲು ರಜೆ ಬೇಕಾಗಿದ್ದು, ಮಂಜೂರು ಮಾಡುವಂತೆ ಕೋರಿ ಬರೆದ ಪತ್ರವೊಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಮೆಹಬೂಬ ಮೂಲದ ಪೇದೆ ಸೋಮ್ ಸಿಂಗ್, ಮೆಹಬೂಬ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಆತ ಕುಟುಂಬವನ್ನು ವೃದ್ಧಿಸುವ ಸಲುವಾಗಿ ಜೂನ್‌ 23 ರಿಂದ 45 ದಿನಗಳ ರಜೆ ಕೋರಿ ಬರೆದಿದ್ದ ಪತ್ರ ವೈರಲ್ ಆಗಿದೆ. ಜತೆಗೆ ರಜಾ ಅರ್ಜಿಯಲ್ಲಿರುವಂತೆ ಆತನಿಗೆ ಇನ್ಸ್‌ಪೆಕ್ಟರ್‌ 45 ದಿನಗಳ ರಜೆ ಮಂಜೂರು ಮಾಡಿದ್ದಾರೆ.

ಆದರೆ ವೈರಲ್ ಆಗಿರುವ ಕುರಿತು ಪೇದೆ ಸೋಮ್‌ ಸಿಂಗ್‌ನನ್ನು ಸಂಪರ್ಕಿಸಿದಾಗ, ವೈರಲ್ ಆಗಿರುವ ಪತ್ರ ನಕಲಿಯಾಗಿದ್ದು, ಮನೆ ನಿರ್ಮಾಣದ ಉದ್ದೇಶದಿಂದ ಒಂದು ತಿಂಗಳ ರಜೆ ಕೋರಿದ್ದೆ ಎಂದಿದ್ದಾರೆ.

ಮೂಲಗಳ ಪ್ರಕಾರ ಸೋಮ್ ಸಿಂಗ್ ಬರೆದಿದ್ದ ರಜಾ ಅರ್ಜಿಯ ಕಾರಣದಿಂದ ಅದು ವೈರಲ್ ಆಗಿದ್ದು, ಅದರ ನಂತರ ಅಧಿಕಾರಿಗಳ ಸೂಚನೆ ಮೇರೆಗೆ ಅರ್ಜಿಯನ್ನು ಬದಲಾಯಿಸಿ ರಜೆಯ ಕಾರಣ ಮತ್ತು ದಿನಾಂಕವನ್ನು ಸೋಮ್ ಬದಲಾಯಿಸಿದ್ದಾನೆ ಎನ್ನಲಾಗಿದೆ.

Comments are closed.