ಕರ್ನಾಟಕ

ಹಜ್‌ ಭವನ ಸ್ವತಂತ್ರ ಸಂಸ್ಥೆಯಾಗಿದ್ದು, ಟಿಪ್ಪು ಸುಲ್ತಾನ್‌ ಹೆಸರಿಟ್ಟರೆ ತಪ್ಪಿಲ್ಲ: ಜಮೀರ್‌

Pinterest LinkedIn Tumblr


ಬೆಂಗಳೂರು: ಹಜ್‌ ಭವನಕ್ಕೆ ಟಿಪ್ಪು ಸುಲ್ತಾನ್‌ ಹೆಸರಿಡಲು ಮನವಿಗಳು ಬಂದಿದ್ದು ಈ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ವಕ್ಫ್, ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಝಡ್‌.ಜಮೀರ್‌ ಅಹಮದ್‌ ಖಾನ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಜ್‌ ಭವನಕ್ಕೆ ಟಿಪ್ಪು ಹೆಸರಿಡುವಂತೆ ಮುಸ್ಲಿಂ ಧರ್ಮಗುರುಗಳು ಮನವಿ ಮಾಡಿರುವುದಾಗಿ ಹೇಳಿದ್ದಾರೆ.

ಕಳೆದ ವರ್ಷ ಹಜ್‌ ಯಾತ್ರೆಯ ವೇಳೆಯಲ್ಲೇ ಈ ಬಗ್ಗೆ ಚರ್ಚಿಸಲಾಗಿತ್ತು. ”ಟಿಪ್ಪು ಸುಲ್ತಾನ್‌ ಹಜ್‌ ಘರ್‌” ಎಂಬ ಹೆಸರಿಡಲು ತಿರ್ಮಾನಿಸಲಾಗಿತ್ತು. ಮೊನ್ನೆ ಹಜ್‌ ಕಮಿಟಿ ಸಭೆಯಲ್ಲೂ ಪ್ರಸ್ತಾಪವಾಗಿತ್ತು ಎಂದರು.

ಹಜ್‌ ಭವನ ಸ್ವತಂತ್ರ ಸಂಸ್ಥೆಯಾಗಿದ್ದು, ಟಿಪ್ಪು ಸುಲ್ತಾನ್‌ ಹೆಸರಿಟ್ಟರೆ ತಪ್ಪಿಲ್ಲ. ಬಿಜೆಪಿಯವರು ವಿರೋಧಿಸುವ ಸಾಧ್ಯತೆ ಇಲ್ಲ ಅಂದುಕೊಳ್ಳುತ್ತೇನೆ ಎಂದಿದ್ದಾರೆ.

ಬಿಜೆಪಿ ತೀವ್ರ ವಿರೋಧ
ಬಿಜೆಪಿಯ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯ ಅದನ್ನು ಹೈಜಾಕ್‌ ಮಾಡಿ ಈಗ ಟಿಪ್ಪು ಹೆಸರಿಡಲು ಮುಂದಾಗಿದೆ. ಟಿಪ್ಪು ಹೆಸರಿಟ್ಟರೆ ಆ ಭವನಕ್ಕೆ ಕಳಂಕ ಬರುತ್ತದೆ ಎಂದು ಬಿಜೆಪಿ ಶಾಸಕ ಮಾಜಿ ಡಿಸಿಎಂ ಆರ್‌.ಅಶೋಕ್‌ ಅವರು ವಿರೋಧ ವ್ಯಕ್ತ ಪಡಿಸಿದ್ದಾರೆ.

ಜಮೀರ್‌ರಿಂದ ಕಾಂಗ್ರೆಸ್‌ ಸರ್ವನಾಶ
ಟಿಪ್ಪು ಹೆಸರಿಡುವುದಕ್ಕೆ ಬಿಜೆಪಿಯ ತೀವ್ರ ವಿರೋಧವಿದೆ. ಟಿಪ್ಪು ಜಯಂತಿ ಮಾಡಿ ಕಾಂಗ್ರೆಸ್‌ 2 ನೇ ಸ್ಥಾನಕ್ಕೆ ಬಂತು. ಈಗ ಜಮೀರ್‌ ಅಹ್ಮದ್‌ ರಿಂದಾಗಿ ಕಾಂಗ್ರೆಸ್‌ ಸರ್ವನಾಶವಾಗುತ್ತದೆ ಎಂದು ಚಾಮರಾಜನಗರದಲ್ಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Comments are closed.