ಕರ್ನಾಟಕ

ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಾರದೇ ಇದ್ದಾರೆ ಏನು ಗತಿ ಗೊತ್ತಾ?: ಭೈರಪ್ಪ

Pinterest LinkedIn Tumblr

ಮೈಸೂರು: ನರೇಂದ್ರ ಮೋದಿಯವರಂತೆ ತ್ಯಾಗಿಯಾಗಿ ದೇಶದ ಅಭಿವೃದ್ಧಿಗಾಗಿ ತನ್ನನ್ನು ತಾನು ತೊಡಗಿಸಿಕೊಂಡ ಇನ್ನೊಬ್ಬ ಪ್ರಧಾನಿ ಇಲ್ಲ ಎಂದು ಹಿರಿಯ ಲೇಖಕ, ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಮೈಸೂರಿನ ಕುವೆಂಪು ನಗರದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ನೀಡಿದ್ದ ಕೇಂದ್ರ ಸರ್ಕಾರದ ಸಾಧನೆಗಳ ಕಿರು ಹೊತ್ತಗೆಯನ್ನು ಸ್ವೀಕರಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು.

ನಾನು 1931ರಲ್ಲಿ ಜನಿಸಿದವನು, ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನನ್ನ ವಯಸ್ಸು ಕೇವಲ 16. ನಾನು ದೇಶಾದ್ಯಂತ ಸಂಚರಿಸಿದ್ದೇನೆ. ಇಲ್ಲಿ ಯಾವ ರೀತಿ ರಾಜಕೀಯ ಚಟುವಟಿಕೆ ನಡೆಯುತ್ತಿದೆ ಎಂಬುದು ನನಗೆ ಚೆನ್ನಾಗಿ ಗೊತ್ತು. ನರೇಂದ್ರ ಮೋದಿಯಂತಹ ಉತ್ತಮ ಪ್ರಧಾನಿಯನ್ನು ಭಾರತ ಈವರೆಗೂ ಕಂಡಿಲ್ಲ ಎಂದು ಶ್ಲಾಘಿಸಿದರು.

ಕಳೆದ ನಾಲ್ಕು ವರ್ಷಗಳಿಂದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡಿದೆ. ಒಂದು ವೇಳೆ 2019ರಲ್ಲಿ ಮೋದಿ ಅವರು ಮತ್ತೆ ಅಧಿಕಾರದ ಗದ್ದುಗೆ ಏರದಿದ್ದರೆ, ನಾವು ಪುನಃ ಮೈತ್ರಿ ಸರ್ಕಾರದ ತಮಾಷೆ ನೋಡಬೇಕಾಗುತ್ತದೆ. ಮೋದಿ ಅವರು ಪೂರ್ಣ ಪ್ರಮಾಣದ ಬಹುಮತದೊಂದಿಗೆ ಅಧಿಕಾರಕ್ಕೆ ಬರಲೇಬೇಕಾಗಿದೆ. ವಿದ್ಯಾಭ್ಯಾಸಯುಳ್ಳ ಜನರು ಹಳ್ಳಿ, ಹಳ್ಳಿಗೆ ಹೋಗಿ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಬೇಕು ಎಂದು ಹೇಳಿದರು.

ಅಲ್ಲದೇ ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪು ಹಣವನ್ನು ವಾಪಸ್ ತರುವಲ್ಲಿ ಪ್ರಧಾನಿ ಮೋದಿ ಅವರು ವಿಫಲರಾಗಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಭೈರಪ್ಪನವರು, ಚುನಾವಣಾ ಪ್ರಚಾರದ ವೇಳೆ ನೀಡಿರುವ ಒಂದು ಹೇಳಿಕೆಯನ್ನು ಇಟ್ಟುಕೊಂಡು ಚರ್ಚೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅವರು ಸರ್ಕಾರಿ ಕೆಲಸಗಳಲ್ಲಿ ಪಾರದರ್ಶಕತೆಯನ್ನು ತಂದಿದ್ದಾರೆ ಎಂದರು.

ಅವರು ಬಡ ಹೆಣ್ಣು ಮಕ್ಕಳ ಸಮಸ್ಯೆ ಬಗ್ಗೆ ದುಡಿಯುತ್ತಾ, ಅವರಿಗೆ ಶಿಕ್ಷಣ ನೀಡುವ ಬಗ್ಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ನೆರೆಯ ದೇಶಗಳ ಜತೆ ಸ್ನೇಹ ಹಸ್ತ ಚಾಚಿರುವುದು ಚೀನಾಕ್ಕೆ ನಡುಕ ತಂದಿದೆ. ಯುಪಿಎ ಆಡಳಿತಾವಧಿಯ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಾಮರ್ಥ್ಯ ಏನಿತ್ತು ಎಂದು ಪ್ರಶ್ನಿಸಿರುವ ಭೈರಪ್ಪ, ಅವರು ಪ್ರತಿಯೊಂದಕ್ಕೂ ಮೇಡಂ(ಸೋನಿಯಾ) ಅನುಮತಿಗಾಗಿ ಕಾಯಬೇಕಾಗಿತ್ತು ಎಂದು ವ್ಯಂಗ್ಯವಾಡಿದರು.

Comments are closed.