ಕರ್ನಾಟಕ

ಮತ್ತೊಂದು ಸೀಕ್ರೇಟ್ ಬಾಯಿ ಬಿಟ್ಟ ಗೌರಿ ಹಂತಕ

Pinterest LinkedIn Tumblr


ಬೆಂಗಳೂರು : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪದಡಿ ಬಂಧಿ ತನಾಗಿರುವ ಪ್ರಮುಖ ಆರೋಪಿ ಸಿಂದಗಿಯ ಪರಶುರಾಮ ವಾಗ್ಮೋರೆ ಲಿಂಗಸುಗೂರಿನ ಪದವಿ ಕಾಲೇಜಿನಲ್ಲಿ ಪ್ರವೇಶ ಪಡೆವ ಸಂದರ್ಭದಲ್ಲಿ ಕೊಪ್ಪಳ ಸರ್ಕಾರಿ ಪದವಿ ಕಾಲೇಜಿನ ಹಾಲಿ ಪ್ರಾಚಾರ್ಯ ಡಾ. ಸಿ.ಬಿ. ಚಿಲ್ಕರಾಗಿ ಅವರ (ಆಗ ಅವರು ಲಿಂಗಸುಗೂರಿನ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು) ಮನೆಯ ವಿಳಾಸ ನೀಡಿದ್ದು, ಚರ್ಚೆಗೆ ಕಾರಣವಾಗಿದೆ.

ಎಸ್‌ಐಟಿ ವಿಚಾರಣೆ ವೇಳೆ ಪರಶುರಾಮ ಈ ವಿಚಾರ ಬಾಯಿ ಬಿಟ್ಟಿದ್ದಾನೆ. ಆದರೆ, ಪರುಶುರಾಮ ವಾಗ್ಮೋರೆ ಯಾರು ಎಂದು ನನಗೆ ಗೊತ್ತಿಲ್ಲ. ನನ್ನ ಗುರುಗಳಾದ ಎ.ಎಂ. ಮದರಿ ಅವರ ಸಹೋದರನ ಮಗನಾಗಿದ್ದರಿಂದ ಅವರ ಕೋರಿಕೆಯ ಮೇರೆಗೆ ನಾನು ಲಿಂಗಸೂರಿನಲ್ಲಿ ಈತನ ಪದವಿ ಪ್ರವೇಶಕ್ಕಾಗಿ ಸಹಾಯ ಮಾಡಿದ್ದೆ. ಅದರ ಹೊರತಾಗಿ ಆತ ನಮ್ಮ ಮನೆಯಲ್ಲಿಯೂ ಇರಲಿಲ್ಲ
ಮತ್ತು ಆತನ ಪರಿಚಯವೂ ಇಲ್ಲ ಎಂದು ಚಿಲ್ಕರಾಗಿ ಹೇಳಿದ್ದಾರೆ.

ನನಗೆ ಈಗ ಗೊತ್ತಾಗಿದೆ, ಆತ ಕಾಲೇಜಿಗೆ ಪ್ರವೇಶ ಪಡೆಯುವ ವೇಳೆಯಲ್ಲಿ ನಾನು ಲಿಂಗಸೂರಿನಲ್ಲಿದ್ದಾಗಿನ ಮನೆಯ ವಿಳಾಸ ನೀಡಿದ್ದಾನೆ ಎಂದು. ಈ ಕುರಿತು ನಾನು ಮದರಿ ಅವರಿಗೂ ಕರೆ ಮಾಡಿ ಮಾತನಾಡಿ ದ್ದೇನೆ ಎಂದಿದ್ದಾರೆ. ಸಾಮಾನ್ಯವಾಗಿ ಪದವಿ ಕಾಲೇಜಿಗೆ ಪ್ರವೇಶ ಪಡೆಯುವಾಗ ತಮ್ಮ ಸ್ವಂತ ಖಾಯಂ ವಿಳಾಸ ನೀಡುತ್ತಾರೆ. ಬೇರೆ ಊರಿನಲ್ಲಿ ಪ್ರವೇಶ ಪಡೆದ ಸಂದರ್ಭದಲ್ಲಿ ಅಲ್ಲಿ ಅವರು ತಾತ್ಕಾಲಿಕವಾಗಿ ವಸತಿ ಇರುವ ವಿಳಾಸ ನೀಡುತ್ತಾರೆ.

ಡಾ. ಸಿ.ಬಿ. ಚಿಲ್ಕರಾಗಿ ಅವರ ಮನೆಯಲ್ಲಿ ವಾಸ್ತವ್ಯವೇ ಇರದ ಪರುಶುರಾಮ ವಾಗ್ಮೋರೆ ಇವರ ಮನೆಯ ವಿಳಾಸ ನೀಡಿದ್ಯಾಕೆ? ಹೀಗೆ ವಿಳಾಸ ನೀಡುವುದಕ್ಕೆ ಕನಿಷ್ಠ ದಾಖಲೆಯಾದರೂ ಬೇಕಾಗುತ್ತದೆ. ಆ ದಾಖಲೆಯನ್ನು ನೀಡಿದರಾ ಎನ್ನುವುದು ಗೊತ್ತಾಗಬೇಕಾಗಿದೆ.

Comments are closed.