ರಾಷ್ಟ್ರೀಯ

ಈ ಎಟಿಎಂನಲ್ಲಿ 500 ರೂ. ಕೇಳಿದರೆ, 2500 ರೂ. ಬರುತ್ತದೆ!

Pinterest LinkedIn Tumblr


ಔರಂಗಾಬಾದ್‌ (ಮಹಾರಾಷ್ಟ್ರ): ಎಟಿಎಂಗೆ ಹಣ ತುಂಬುವ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಬ್ಯಾಂಕ್‌ ಸಂಕಷ್ಟಕ್ಕೆ ಸಿಲುಕಿದೆ.

ವಿಜಯನಗರದ ಭಾಗದಲ್ಲಿರುವ ಆ್ಯಕ್ಸಿಸ್‌ ಬ್ಯಾಂಕ್‌ ಎಟಿಎಂನಲ್ಲಿ ನಮೂದಿಸಿದ್ದಕ್ಕಿಂತ 5 ಪಟ್ಟು ಹೆಚ್ಚು ಹಣ ಗ್ರಾಹಕರ ಕೈ ಸೇರಿತ್ತಿತ್ತು. ಅಂದರೆ 500 ರೂ. ನಮೂದಿಸಿದರೆ, 2500 ರೂ. ಹೊರ ಬರುತ್ತಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಇದೇ ಎಟಿಎಂನಿಂದ ಹಣ ಪಡೆಯಲು ಜನರ ಸಾಲು ಬೆಳೆದಿದೆ.

ಎಟಿಎಂ ಎದುರು ಸಾಲುಗಟ್ಟಲೆ ಜನ ಕಂಡ ಪೊಲೀಸರು ಗಮನಿಸಿ, ವಿಚಾರಿಸಿದಾಗ, ಸತ್ಯ ಸಂಗತಿ ಬೆಳಕಿಗೆ ಬಂದಿದೆ. ಕೂಡಲೇ ಎಟಿಎಂನಿಂದ ಆಗುತ್ತಿರುವ ತಪ್ಪಿನ ಕುರಿತು ಬ್ಯಾಂಕ್‌ಗೆ ತಿಳಿಸಿ, ಎಟಿಎಂ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ನೋಟಿನ ಸ್ಥಳ ಬದಲಾವಣೆಯೇ ಕಾರಣ:
ಸೋಮವಾರ ಸಂಜೆ 4ರ ವೇಳೆಗೆ ಎಟಿಎಂಗೆ ಹಣ ತುಂಬಲು ಸಿಬ್ಬಂದಿ ಬಂದಿದ್ದಾರೆ. 500 ರೂ. ನೋಟುಗಳನ್ನು ತುಂಬುವ ಜಾಗದಲ್ಲಿ 2 ಸಾವಿರ ರೂ. ನೋಟುಗಳನ್ನು ತುಂಬಿರುವುದು ಈ ಪ್ರಮಾದಕ್ಕೆ ಕಾರಣ ಎಂದು ತಂತ್ರಜ್ಞರ ತಂಡ ತಿಳಿದುಕೊಂಡಿದೆ.

ಸಂಜೆ 4 ಗಂಟೆ ಬಳಿಕ ಎಟಿಎಂನಿಂದ ಹಣ ಪಡೆದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಈ ಬಗ್ಗೆ ಬ್ಯಾಂಕ್‌ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ. ಹಣ ತುಂಬಿದ ಬಳಿಕ ಎಟಿಎಂನಿಂದ 2.68 ಲಕ್ಷ ರೂ. ತೆಗೆಯಲಾಗಿದೆ ಎಂದು ಬ್ಯಾಂಕ್‌ ಮಾಹಿತಿ ನೀಡಿದೆ.

Comments are closed.