ಕರ್ನಾಟಕ

ಪ್ರೀತಿಸಿ ಮದುವೆಯಾಗಿ 11 ದಿನದಲ್ಲಿ ಪರಾರಿಯಾದ ವರ: ಠಾಣೆ ಎದುರು ಯುವತಿ ಪ್ರತಿಭಟನೆ

Pinterest LinkedIn Tumblr


ಸಾವಳಗಿ: ಪ್ರೀತಿಸಿ 10 ದಿನದ ಹಿಂದೆಯಷ್ಟೇ ವಿವಾಹವಾಗಿದ್ದ ವ್ಯಕ್ತಿ ಬಿಟ್ಟು ಪೋಸ್ಟ್‌ ಮ್ಯಾನ್‌ ವಿರುದ್ಧ ಯುವತಿ ಹಾಗೂ ಆಕೆಯ ಕುಟುಂಬದವರು ಸಾವಳಗಿ ಪೊಲೀಸ್‌ ಠಾಣೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ಭಾಗ್ಯಶ್ರೀ ದಿಲೀಪ ಬಿದರಿ (23)ಯನ್ನು ಮದುವೆಯಾಗಿದ್ದ, ಬಿದರಿ ಗ್ರಾಮದ ಅಂಚೆ ಇಲಾಖೆಯ ಪೋಸ್ಟ್‌ಮನ್‌ನಾಗಿ ಕಾರ್ಯನಿರ್ವಹಿಸುತ್ತಿರುವ, ವಿಜಯಪೂರ ಜಲ್ಲೆಯ ಕಂಬಾಗಿ ಗ್ರಾಮದ ಆನಂದ ಹಾದಿಮನಿ (24) ಸಾವಳಗಿ ಪೊಲೀಸ್‌ ಸಮ್ಮುಖದಲ್ಲೇ ಪ್ರೇಮ ವಿವಾಹವಾಗಿ 10 ದಿನಕ್ಕೆ ಪರಾರಿಯಾಗಿದ್ದಾನೆ. ಮತ್ತೊಂದು ಯುವತಿಯೊಂದಿಗೆ ಮದುವೆ ಮಾಡಿಕೊಳ್ಳಲು ಸಜ್ಜಾಗಿದ್ದಾನೆನ್ನುವುದು ಯುವತಿ ಕುಟುಂಬದವರ ಅರೋಪ. ನನ್ನ ಗಂಡನನ್ನು ಹುಡುಕಿಕೊಡಿ ಎಂದು ನವವಿವಾಹಿತೆ ಮಂಗಳವಾರ ಸಾವಳಗಿ ಪೊಲೀಸ್‌ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದಳು. ಇದಕ್ಕೆ ಕುಟುಂಬದವರೂ ಸಾಥ್‌ ನೀಡಿದರು.

ಭಾಗ್ಯಶ್ರೀ ಮತ್ತು ಆನಂದ ಇಬ್ಬರು ಕೆಲ ವರ್ಷಗಳಿಂದ ಪ್ರೀತಿಸಿದ್ದರಿಂದ ಸಾವಳಗಿ ಪೊಲೀಸ್‌ ಠಾಣೆಯ ಪಕ್ಕದ ಅಂಬಾಭವಾನಿ ದೇವಸ್ಥಾನದಲ್ಲಿ 2018 ಜೂನ್‌ 7ರಂದು ಠಾಣೆಯ ಸಿಬ್ಬಂದಿ, ಗ್ರಾಮಸ್ಥರ ಸಮ್ಮುಖದಲ್ಲಿ ಮದುವೆ ಮಾಡಿಸಲಾಗಿತ್ತು, ಮರುದಿನ ಜಮಖಂಡಿಯಲ್ಲಿ ರಿಜಿಸ್ಟರ ಮದುವೆ ಕೂಡಾ ಆಗಿದೆ.

ಮದುವೆಯಾಗಿ ಏಳು ದಿನಕ್ಕೆ ಗಂಡ ಪರಾರಿಯಾಗಿದ್ದಾನೆ, ನಾವು ಬಡವರು ಎಂದು ತಿಳಿದು ನನ್ನ ಗಂಡ ಮತ್ತೊಂದು ಮದುವೆಯಾಗಲು ಹೊರಟಿದ್ದಾನೆ. ಅವನು ಎಲ್ಲೇ ಇದ್ದರೂ ಹುಡುಕಿಕೊಡುವಂತೆ ಒತ್ತಾಯಿಸಿದ್ದಾರೆ. ಮದುವೆ ಮಾಡಿಸಿದ ಪೊಲೀಸರೇ ಸ್ಪಂದಿಸದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರ ಎದುರು ಅಲವತ್ತುಕೊಂಡಿದ್ದಾಳೆ. ಎಸ್‌ಐ ಠಾಣೆಯಲ್ಲಿ ಇಲ್ಲದೇ ಇದ್ದುದರಿಂದ ಸದ್ಯವೇ ಹುಡುಗನನ್ನು ಕರೆಯಿಸಿ ಮಾತುಕತೆ ನಡೆಸಲಾಗುವುದು ಎಂದು ಪೊಲೀಸರು ತಿಳಿ ಹೇಳಿದರು. ಈ ಕುರಿತು ಯುವಕನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

“ನನ್ನ ತಂಗಿಗೆ ಅನ್ಯಾಯವಾಗಿದೆ ಅವನನ್ನು ಹುಡುಕಿ ತಂದು ನನ್ನ ತಂಗಿ ಜೊತೆಯಲ್ಲಿ ಚೆನ್ನಾಗಿ ಸಂಸಾರ ಮಾಡುವಂತೆ ತಿಳಿಹೇಳಬೇಕು.” –ರಮೇಶ ಬಿದರಿ, ಯುವತಿ ಸಹೋದರ

Comments are closed.