ಕರ್ನಾಟಕ

ಭೀಮಾತೀರದ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣ: ರುಂಡ, ಮುಂಡ ಕತ್ತರಿಸಿದ್ದು ನಾವೇ ಎಂದ ಹಂತಕರು

Pinterest LinkedIn Tumblr


ವಿಜಯಪುರ: ಭೀಮಾತೀರದ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಆರೋಪಿಗಳಾದ ಹನುಮಂತ ‌ಪೂಜಾರಿ, ಸಿದ್ದಗೊಂಡ ಇಬ್ಬರೂ ಗಂಗಾಧರನ ರುಂಡ, ಮುಂಡ ಕತ್ತರಿಸಿ ರುಂಡವನ್ನು‌ ಗೋಣಿ‌ ಚೀಲದಲ್ಲಿ ತುಂಬಿ ಭೀಮಾ ನದಿಯ ಹಿಂಗಣಿ ಬ್ಯಾರೇಜಿನಲ್ಲಿ ಎಸೆದಿದ್ದಾಗಿ ಹೇಳಿಕೆ‌ ನೀಡಿದ್ದಾರೆ.

ಪ್ರಕರಣ ಸಿಐಡಿಗೆ ಹಸ್ತಾಂತರ
‌ಭೀಮಾತೀರದ ಹಂತಕ ಗಂಗಾಧರ ಚಡಚಣ ನಿಗೂಢ ಕೊಲೆಯ ಇಡೀ ಪ್ರಕರಣದ ತನಿಖೆಯನ್ನು ಇಂದು ಸಿಐಡಿ ತನ್ನ ಸುಪರ್ಧಿಗೆ ತೆಗೆದುಕೊಳ್ಳುತ್ತಿದ್ದು, ಆರೋಪಿಗಳಾದ ಹನುಮಂತ ಪೂಜಾರಿ, ಸಿದ್ದಗೊಂಡ ಸೇರಿದಂತೆ ನ್ಯಾಯಾಂಗ ಬಂಧನದಲ್ಲಿರುವ ಪಿಎಸ್​ಐ ಗೋಪಾಲ್​ ಹಳ್ಳೂರು ಹಾಗೂ ಮೂವರು ಪೇದೆಗಳನ್ನು ಸಿಐಡಿ ತನ್ನ ವಶಕ್ಕೆ ಪಡೆದುಕೊಳ್ಳಲಿದೆ.

ಡಿವೈಎಸ್​ಪಿ ಜನಾರ್ದನ ನೇತೃತ್ವದಲ್ಲಿ ಅಧಿಕಾರಿಗಳು ತನಿಖೆ ಆರಂಭಿಸಲಿದ್ದಾರೆ. ಕೊಲೆಗೀಡಾದ ಗಂಗಾಧರ ತಾಯಿ ವಿಮಲಾಬಾಯಿ ಅವರನ್ನು ನಿನ್ನೆ ಸಿಐಡಿ ಅಧಿಕಾರಿಗಳು ಚಡಚಣ ಪಟ್ಟಣದ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದರು.

Comments are closed.