ಕರ್ನಾಟಕ

ಇನ್ನೊಂದು ಮದುವೆಗಾಗಿ ಗಂಡನ ನಕಲಿ ಡೆತ್​ ಸರ್ಟಿಫಿಕೇಟ್ ಮಾಡಿಸಿದ ಹೆಂಡತಿ!

Pinterest LinkedIn Tumblr


ಬೆಂಗಳೂರು: ಎರಡನೇ ಮದುವೆಗಾಗಿ ಮಹಿಳೆಯೊಬ್ಬಳು ಪತಿ ಬದುಕಿರುವಾಗಲೇ ಆತನ ಡೆತ್​ ಸರ್ಟಿಫಿಕೇಟ್​ (ಮರಣ ಧೃಢೀಕರಣ ಪ್ರಮಾಣಪತ್ರ) ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹೌದು, ಡೆತ್​ ಸರ್ಟಿಫಿಕೇಟ್​ ಇಟ್ಟುಕೊಂಡು ಬ್ಯಾಂಕ್​ ಅಧಿಕಾರಿ ನಾಗರಾಜ್​ ಎಂಬುವವರನ್ನು ಎರಡನೇ ಮದುವೆಯಾಗಿದ್ದು, ಸತ್ಯ ತಿಳಿದ ನಂತರ ಮಹಿಳೆಯ ಎರಡನೇ ಪತಿ ನಾಗರಾಜ್​ ಪ್ರಕರಣ ಸಂಬಂಧ ಕುಮಾರಸ್ವಾಮಿ ಲೇಔಟ್​ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ.

ಮೊದಲನೇ ಗಂಡ ಬದುಕಿರುವಾಗಲೇ ಸುಳ್ಳು ಪ್ರಮಾಣಪತ್ರ ನೀಡಿ ನನ್ನನ್ನು ಮದುವೆಯಾಗಿದ್ದಾಳೆ. ಜತೆಗೆ ನನ್ನ ಆಸ್ತಿದೋಚಲು ಈ ಕೃತ್ಯ ಎಸಗಿದ್ದಾಳೆ ಎಂದು ಬ್ಯಾಂಕ್​ ಉದ್ಯೋಗಿ ನಾಗರಾಜ್​ ಆರೋಪಿಸಿದ್ದಾರೆ.

ಏನಿದು ಪ್ರಕರಣ?
ಇತ್ತೀಚೆಗೆ ನಾಗರಾಜ್​ ಎಂಬುವವರ ಪತ್ನಿ ಮೃತಪಟ್ಟಿದ್ದರಿಂದ ಅವರು ಮತ್ತೊಂದು ಮದುವೆಯಾಗಲು ಮುಂದಾದಾಗ, ಚಿಕ್ಕಬಳ್ಳಾಪುರ ಮೂಲದ ವೆಂಕಟಲಕ್ಷ್ಮೀ ಎಂಬುವವರ ಪರಿಚಯವಾಗಿದೆ. ನಂತರ ಇಬ್ಬರೂ ಮದುವೆಯಾಗಿದ್ದಾರೆ.

ಆದರೆ ವೆಂಕಟಲಕ್ಷ್ಮಿ ನಾಗರಾಜ್​ ಅವರನ್ನು ಮದುವೆಯಾಗುವ ಮುಂಚೆ ನನ್ನ ಪತಿ 1990ರಲ್ಲೇ ಮೃತಪಟ್ಟಿರುವುದಾಗಿ ಸುಳ್ಳು ಡೆತ್​ ಸರ್ಟಿಫಿಕೇಟ್​ ಮಾಡಿಸಿ ತೋರಿಸಿದ್ದಾರೆ.

ಮದುವೆಯಾದ ಬಳಿಕ ವೆಂಕಟಲಕ್ಷ್ಮಮ್ಮ ನಾಗರಾಜ್ ಅವರು​ ಕಟ್ಟಿದ್ದ ಚಿನ್ನದ ತಾಳಿ ಸೇರಿ ಇತರೆ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದಾರೆ. ಅನುಮಾನಗೊಂಡ ನಾಗರಾಜ್​ ಚಿಕ್ಕಬಳ್ಳಾಪುರ ತಹಶಿಲ್ದಾರ್​ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ವೆಂಕಟಲಕ್ಷ್ಮಳ ಮೊದಲ ಪತಿ ಬದುಕಿರುವುದು ಬೆಳಕಿಗೆ ಬಂದಿದೆ

Comments are closed.