ಕರ್ನಾಟಕ

ನಮ್ಮ ದೇಶ ಮಕ್ಕಳನ್ನು ಹುಟ್ಟಿಸುವುದರಲ್ಲಿ ನಂಬರ್‌ ಒನ್‌: ಮಾಜಿ ಸಚಿವ ಆಂಜನೇಯ

Pinterest LinkedIn Tumblr


ಕೊಪ್ಪಳ: ‘ಭಾರತ ಮಕ್ಕಳು ಹುಟ್ಟಿಸುವುದರಲ್ಲಿ ನಂಬರ್‌ ಒನ್‌ ಇಂಡಿಯಾ .ಅದಕ್ಕೆ ಇತಿ ಮಿತಿ ಇಲ್ಲ. ಸ್ಪರ್ಧೆ ಇಟ್ಟರೆ ಭಾರತ ನಂಬರ್‌ ಒನ್‌’ ಇದು ಮಾಜಿ ಸಚಿವ ಆಂಜನೆಯ ಅವರು ನವ ವಧು-ವರರಿಗೆ ಹಾರೈಸಿದ ಪರಿ.

ಸಾಮೂಹಿಕ ವಿವಾಹದಲ್ಲಿ ನೂತನ ಜೋಡಿಗಳಿಗೆ ಶುಭ ಹಾರೈಸಿ ನಿಮಗೆಲ್ಲಾ ಒಳ್ಳೆದಾಗಲಿ , ಒಂದು ಅಥವಾ 2 ಮಕ್ಕಳನ್ನು ಪಡೆಯಿರಿ . ಆ ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ನೀಡಿ ಎಂದರು.

‘ನನಗೆ ಇಬ್ಬರೆ ಮಕ್ಕಳು,ಇಬ್ಬರು ಹೆಣ್ಣು ಮಕ್ಕಳು. ನನ್ನ ಅವ್ವ ಮತ್ತೆಲ್ಲಾ ಇನ್ನೊಂದು ಬೇಕು ಬೇಕು ಅಂದರು ನಾನು ಬೇಡ, ಎಲ್ಲಾ ಕಟ್‌ ಮಾಡಿ ಬಿಸಾಡಿದ್ದೇನೆ ಅಂದೆ’ ಅಂದರು.

ದೇವರ ಪೂಜೆ ಅಂದರೆ ಕಾಯಕವೇ ಕೈಲಾಸ ಬಸವಣ್ಣನ ತತ್ವವನ್ನು ನಾವು ಪಾಲಿಸಬೇಕು . ಕಾಯಕದ ಮೂಲಕ ದೇವರನ್ನು ಪೂಜಿಸಿ , ಕುರಿ, ಕೋಣ, ಕೋಳಿ ಬಲಿ ಕೊಟ್ಟು ದೇವರನ್ನು ಪೂಜಿಸುವುದನ್ನು ಬಿಡಿ.ಕುಡಿಯಬೇಡಿ, ದುಷ್ಚಟಗಳಿಗೆ ದಾಸರಾಗಬೇಡಿ ಎಂದರು.

Comments are closed.