ಕರ್ನಾಟಕ

ಜಿಯೋದ ಪ್ರೀಪೇಯ್ಡ್ ಬಳಕೆದಾರರಿಗೆ “ಹಾಲಿಡೇ ಹಂಗಾಮ”!

Pinterest LinkedIn Tumblr


ಬೆಂಗಳೂರು: ಜಿಯೋ ತನ್ನ ಪ್ರೀಪೇಯ್ಡ್ ಬಳಕೆದಾರರಿಗೆ ಮತ್ತೊಂದು ಆಕರ್ಷಕ ಕೊಡುಗೆ ಪರಿಚಯಿಸಿದೆ. ರೂ. 100 ತತ್‌ಕ್ಷಣದ ರಿಯಾಯಿತಿಯಿಂದಾಗಿ ಅತ್ಯಂತ ಜನಪ್ರಿಯ ರೂ. 399ರ ಜಿಯೋ ಪ್ಲಾನ್ ಇದೀಗ ರೂ. 299ರ ವಾಸ್ತವಿಕ ಬೆಲೆಯಲ್ಲಿ ದೊರಕಲಿದೆ.

ರೂ. 100ರ ಈ ರಿಯಾಯಿತಿ ಎರಡು ಭಾಗಗಳಲ್ಲಿ ದೊರಕಲಿದೆ:

ಮೈಜಿಯೋ ಆಪ್ ಮೂಲಕ ರೀಚಾರ್ಜ್ ಮಾಡಿದಾಗ, ರೂ. 50 ಕ್ಯಾಶ್‌ಬ್ಯಾಕ್ ವೋಚರ್ ಹೊಂದಿರುವ ಜಿಯೋ ಪ್ರೀಪೇಯ್ಡ್ ಗ್ರಾಹಕರಿಗೆ ರೂ. 50 ತತ್‌ಕ್ಷಣದ ರಿಯಾಯಿತಿ ಮೈಜಿಯೋ ಆಪ್‌ನಲ್ಲಿ, ಫೋನ್‌ಪೇ ಮೂಲಕ ಹಣ ಪಾವತಿಸಿದಾಗ ರೂ. 50 ತತ್‌ಕ್ಷಣದ ರಿಯಾಯಿತಿ ಇದೊಂದು ಸೀಮಿತ ಅವಧಿಯ ಕೊಡುಗೆಯಾಗಿದ್ದು ಜೂನ್ 1ರಿಂದ ಜೂನ್ 15, 2018ರವರೆಗೆ ಮಾತ್ರ ಲಭ್ಯವಿರಲಿದೆ.

ರಜಾದಿನಗಳ ಸಂದರ್ಭದಲ್ಲಿ ಪರಿಚಯಿಸಲಾಗಿರುವ ಈ ಕೊಡುಗೆಯ ಮೂಲಕ, ಗ್ರಾಹಕರು ತಮ್ಮ ಓಡಾಟದ ಸಂದರ್ಭದಲ್ಲೂ ಸುಲಭವಾಗಿ ರೀಚಾರ್ಜ್ ಮಾಡಿಕೊಂಡು ತಮ್ಮ ರಜೆಯ ಸದುಪಯೋಗಪಡಿಸಿಕೊಳ್ಳುವಲ್ಲಿ ನೆರವಾಗಲು ಜಿಯೋ ಇಚ್ಛಿಸುತ್ತದೆ.

ಈ ಹೊಸ ಕೊಡುಗೆಯ ಮೂಲಕ ಜಿಯೋದ ಅಪರಿಮಿತ ಮಾಸಿಕ ಸೇವೆಗಳು (ಪ್ರತಿದಿನ 1.5 ಜಿಬಿ ಡೇಟಾ ಜೊತೆಗೆ) ವಾಸ್ತವಿಕವಾಗಿ ಕೇವಲ ರೂ. 100ರಲ್ಲಿ ದೊರಕಲಿವೆ!

ರೂ. 399 (ರೂ. 100 ತತ್‌ಕ್ಷಣದ ರಿಯಾಯಿತಿಯೊಡನೆ) = ರೂ. 299 / ಮೂರು ತಿಂಗಳಿಗೆ = ಪ್ರತಿ ತಿಂಗಳಿಗೆ ರೂ. 100.

*ರೂ. 100 ತತ್‌ಕ್ಷಣದ ರಿಯಾಯಿತಿ ಪರಿಣಾಮ, ರೂ. 399ರ ಪ್ಲಾನ್ ಈಗ ಕೇವಲ ರೂ. 299 ಮಾತ್ರ.

*ಫೋನ್‌ಪೇ ಮೂಲಕ ಪಾವತಿಸುವ ಗ್ರಾಹಕರಿಗೆ ರೂ. 100ರ ಈ ವಿಶೇಷ ರಿಯಾಯಿತಿ ಮೈಜಿಯೋ ಆಪ್‌ನಲ್ಲಿ ಲಭ್ಯ

*ಕೊಡುಗೆಯ ಅವಧಿ ಜೂನ್ 01ರಿಂದ ಜೂನ್ 15, 2018ರವರೆಗೆ

Comments are closed.