ಕರ್ನಾಟಕ

ಕಾಂಗ್ರೆಸ್ ನ ರಾಹುಲ್ ಗಾಂಧಿ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದೇನೆ, ಜನತೆಯ ಆಶೀರ್ವಾದದಿಂದ ಅಲ್ಲ: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ನಾನು ಜನತೆಯ ಮುಲಾಜಿನಿಂದ ಸಿಎಂ ಆಗಿಲ್ಲ ಎಂದು ಹೇಳಿ ವಿವಾದ ಮೂಡಿಸಿದ್ದ ಕುಮಾರಸ್ವಾಮಿ, ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನನಗೆ ಸರಕಾರ ರಚಿಸಲು ಜನತೆಯ ಆಶೀರ್ವಾದ ಇಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಅವಕಾಶ ಕೊಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ನನಗೆ ಸರಕಾರ ರಚಿಸಲು ಜನತೆಯ ಆಶೀರ್ವಾದ ಇಲ್ಲ. ಪುಣ್ಯಾತ್ಮ ರಾಹುಲ್‌ ಗಾಂಧಿ ಒಂದು ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ,” ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಭೆಯಲ್ಲಿ ಹೇಳಿದ್ದಾರೆ. 3 ಗಂಟೆಗಳ ಕಾಲ ರೈತರೊಂದಿಗೆ ಸಭೆ ನಡೆಸಿದ ಸಿಎಂ ಕುಮಾರಸ್ವಾಮಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಪ್ಪಿಗೆ ಬಳಿಕವಷ್ಟೇ ರೈತರ ಸಾಲ ಮನ್ನಾ ಮಾಡಲು ಸಾಧ್ಯ. ಈ ವಿಚಾರದಲ್ಲಿ ನಾನು ಅವರ ಮನವೊಲಿಕೆ ಮಾಡುವುದರಲ್ಲಿ ಯಶಸ್ವಿಯಾಗುತ್ತೇನೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು, ರಾಹುಲ್ ಗಾಂಧಿ ಸಹ ಸಾಲ ಮನ್ನಾ ಪರ ನಿಲುವಿಗೆ ಬದ್ಧರಾಗಿದ್ದಾರೆ. 2009ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ 68 ಸಾವಿರ ಕೋಟಿ ಮೌಲ್ಯದ ಸಾಲ ಮನ್ನಾ ಮಾಡಲಾಗಿತ್ತು ಎಂದು ಬೆಂಗಳೂರಿನಲ್ಲಿ ನಡೆದ ರೈತರ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದರು.

Comments are closed.