ಗುಂಟೂರು: ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಕೋಟ್ಯಧಿಪತಿ ಬಿಲ್ ಕಲೆಕ್ಟರ್ ಅನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ ) ಅಧಿಕಾರಿಗಳು ಬಂಧಿಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಮೇರೆಗೆ ನಗರ ಸಭೆಯಲ್ಲಿ ಕೆಲಸ ಮಾಡುತ್ತಿದ್ದ ಮುದ್ರಬೋಯಿನಾ ಮಾಧವ್ ಎಂಬುವನನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಗುಂಟೂರು ನಗರದ 7 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಮಚಾವರಂ ಹಾಗೂ ಪೊನ್ನೂರು ಮಂಡಲದಲ್ಲೂ ರೇಡ್ ಮಾಡಲಾಗಿದೆ. ಅಲ್ಲದೆ, ಮಾಧವ್ ಸಂಬಂಧಿಕರ ನಿವಾಸಿಗಳ ಮೇಲೂ ಡಿಎಸ್‌ಪಿ ದೇವಾನಂದ್ ಸಂತೋ ನೇತೃತ್ವದ 8 ತಂಡಗಳು ಏಕಕಾಲಕ್ಕೆ ದಾಳಿ ನಡೆಸಿದ್ದವು. ಈ ವೇಳೆ ಜಮೀನು, ಸೈಟುಗಳಿಗೆ ಸೇರಿದ ದಾಖಲೆ ಪತ್ರಗಳು, ಜ್ಯುವೆಲ್ಲರಿ ಹಾಗೂ 50 ಕೋಟಿ ಮೌಲ್ಯದ ಹಣವನ್ನು ಕಾಳ ಸಂತೆಯಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮುದ್ರಬೋಯಿನಾ ಮಾಧವ್ 4 ಮನೆಗಳನ್ನು ಹೊಂದಿದ್ದು, 20 ಸೈಟುಗಳು, ಲಕ್ಷಾಂತರ ರೂಪಾಯಿ ಮೊತ್ತದ ಚಿನ್ನಾಭರಣಗಳನ್ನು ಬಿಲ್ ಕಲೆಕ್ಟರ್ ಹೊಂದಿದ್ದಾನೆ. ಅಲ್ಲದೆ, ಪತ್ನಿಯ ಹೆಸರಿನಲ್ಲಿ ಅರುಂಡೇಲ್‌ಪೇಟೆಯಲ್ಲಿ ಕಚೇರಿಯನ್ನು ಹೊಂದಿರುವುದು ಎಸಿಬಿ ದಾಳಿ ವೇಳೆ ಬೆಳಕಿಗೆ ಬಂದಿದೆ.
ಕೋಟ್ಯಧಿಪತಿ ಬಿಲ್ ಕಲೆಕ್ಟರ್ ಬಂಧನ
2012ರಲ್ಲಿ ತಂದೆ ತೀರಿಕೊಂಡ ಸಹಾನುಭೂತಿ ಆಧಾರದ ಮೇರೆಗೆ ಮಾಧವ್‌ಗೆ ಸರಕಾರ ಕೆಲಸ ನೀಡಿತ್ತು. ಇನ್ನು, 2016ರಲ್ಲೇ ಮಾಧವ್‌ರನ್ನು ನಗರಸಭೆ ಕಮಿಷನರ್ ನಾಗಲಕ್ಷ್ಮಿ ಎಸ್. ಅಮಾನತು ಮಾಡಿದ್ದರು. ಬಳಿಕ, ಅವನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಈಗ ಮತ್ತೆ ಅಕ್ರಮ ಆಸ್ತಿಗಳಿಕೆ ಆರೋಪದ ಮೇರೆಗೆ ಆತನನ್ನು ವಶಕ್ಕೆ ಪಡೆಯಲಾಗಿದೆ.
Comments are closed.