ಬೆಂಗಳೂರು: ಇಡೀ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಐಜಿಪಿ ಬಿ.ಕೆ.ಸಿಂಗ್ ನೇತೃತ್ವದ ಎಸ್‌ಐಟಿ ತಂಡ 3ನೇ ಎಸಿಎಂಎಂ ನ್ಯಾಯಾಲಯಕ್ಕೆ 650 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ. ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದ ಆರೋಪಿ ನವೀನ್ ಅಲಿಯಾಸ್ ಹೊಟ್ಟೆಮಂಜ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಸುದೀರ್ಘ 9 ತಿಂಗಳು ತನಿಖೆ ನಡೆಸಿದ ಎಸ್‌ಐಟಿ ಗೌರಿ ಹತ್ಯೆ ಬಗ್ಗೆ ಪ್ರಬಲ ಸಾಕ್ಷಿಗಳನ್ನು ಕಲೆ ಹಾಕುತ್ತಿತ್ತು. ಬಂಧಿತ ಅರೋಪಿ ಕೆ.ಟಿ. ನವೀನ್ ಕುಮಾರ್ ಮತ್ತು ಪ್ರವೀಣ್ ಪಾತ್ರದ ಬಗ್ಗೆ ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿತ್ತು. 131 ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿರುವ ಎಸ್ಐಟಿಗೆ ಗೌರಿ ಹತ್ಯೆ ಬಗ್ಗೆ ತನ್ನ ಹಲವು ಸ್ನೇಹಿತರೊಂದಿಗೆ ಮಾಹಿತಿ ಹಂಚಿಕೊಂಡಿದ್ದ ಕುರಿತು ಮಾಹಿತಿ ಲಭ್ಯವಾಗಿತ್ತು. ಗೌರಿ ಹತ್ಯೆ ಬಳಿಕ ತನ್ನ ಪರಿಚಯಸ್ಥರ ಬಳಿ ನವೀನ್ ಮಾಹಿತಿ ವಿನಿಮಯ ಮಾಡಿಕೊಂಡಿದ್ದ ಕುರಿತು ಸ್ನೇಹಿತರ ಹೇಳಿಕೆಗಳನ್ನು ಎಸ್‌ಐಟಿ ಅಧಿಕಾರಿಗಳು ದಾಖಲಿಸಿದ್ದಾರೆ.
ಎಸ್‌ಐಟಿ ರ್ಜ್‌ಶೀಟ್‌ನಲ್ಲಿ ಏನೇನಿದೆ..?
# ಗೌರಿ ಲಂಕೇಶ್ ಹತ್ಯೆಗೆ ಸಂಚು ರೂಪಿಸಿದ್ದು ನವೀನ್‌ಗೆ ಗೊತ್ತಿತ್ತು.
# ಈ ವಿಚಾರ ಗೊತ್ತಿದ್ದರೂ ಆರೋಪಿ ನವೀನ್ ಮುಚ್ಚಿಟ್ಟಿದ್ದ.
# ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಸಂಚು ರೂಪಿಸಲಾಗಿತ್ತು.
# ಗೌರಿ ಹತ್ಯೆಗೆ ಶೂಟರ್‌ಗಳಿಗೆ ಬುಲೆಟ್ ನೀಡಿದ್ದ ನವೀನ್.
# ಇದಾದ ಬಳಿಕ ಮತ್ತೊಂದು ಕೊಲೆಗೆ ಪ್ಲ್ಯಾನ್ ಮಾಡಿದ್ದ ನವೀನ್.
# ಪ್ರೊ. ಭಗವಾನ್ ಹತ್ಯೆಗೂ ಸಂಚು ರೂಪಿಸಿದ್ದ ಆರೋಪಿ ನವೀನ್.
# ಎಸ್‌ಐಟಿ ತನಿಖೆ ವೇಳೆ ಈ ಎಲ್ಲ ವಿಚಾರಗಳು ಬೆಳಕಿಗೆ
ನವೀನ್ ಸ್ನೇಹಿತರ ಬಳಿ ಹೇಳಿದ್ದೇನು..?
ಸ್ನೇಹಿತ- ಈ ನಡುವೆ ಕಾಣಿಸ್ತಿರಲಿಲ್ಲ, ಎಲ್ಲೋಗಿದ್ದೆ ನವೀನ್?
ನವೀನ್ – ಟಿವಿ ನೋಡಲಿಲ್ವಾ? ಗೌರಿ ಕೇಸ್ ಮಾಡಿದ್ದು ನಾವೇ, ಇನ್ನಿಬ್ಬರು ಸ್ನೇಹಿತರ ಮುಂದೆ ದೊಡ್ಡ ಟಾಸ್ಕ್ ಇದೆ. ಪ್ರೊ. ಕೆ.ಎಸ್. ಭಗವಾನ್ ಅವರನ್ನೂ ಮುಗಿಸಬೇಕಿದೆ.
Comments are closed.