ಕರ್ನಾಟಕ

ರಸ್ತೆಯಲ್ಲಿ ಮಗುವಿನ ಜತೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಅಪರಿಚಿತನಂತೆ ಬೈಕ್​​ನಲ್ಲಿ ಬಂದು ಚಾಕುವಿನಿಂದ ದಾಳಿ ಮಾಡಿದ ಪತಿ !

Pinterest LinkedIn Tumblr

ಬೆಂಗಳೂರು: ಕೆ.ಆರ್​.ಪುರದ ಟಿನ್​ ಫ್ಯಾಕ್ಟರಿ ಬಳಿ ಮಂಗಳವಾರ ರಾತ್ರಿ 11 ಗಂಟೆ ವೇಳೆ ರಸ್ತೆಯಲ್ಲಿ ಮಗುವಿನ ಜತೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಬೈಕ್​ನಲ್ಲಿ ಬಂದ ವ್ಯಕ್ತಿಯೊಬ್ಬ ಚಾಕುವಿನಿಂದ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆಯನ್ನು ಕೆ.ಆರ್​.ಪುರ ನಿವಾಸಿ ಲುಮೀನ್​ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಲುಮೀನ್​ ಅವರ ತಲೆ, ಕುತ್ತಿಗೆ, ಕೈ, ಬೆನ್ನಿನ ಭಾಗಕ್ಕೆ ತೀವ್ರ ಗಾಯಗಳಾಗಿದ್ದು ಅವರಿಗೆ ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಅಸಲಿಗೆ ಮಹಿಳೆಯ ಮೇಲೆ ಚಾಕು ದಾಳಿ ನಡೆಸಿದವನು ಆಕೆಯ ಪತಿಯೇ. ಈ ರೀತಿ ಮಾರಕ ದಾಳಿ ನಡೆಸಲು ಕಾರಣವೇನು ಎಂಬುದು ಈ ವರೆಗೆ ತಿಳಿದು ಬಂದಿಲ್ಲ. ಮಹದೇವಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪತ್ನಿಯ ಮೇಲೆ ಪತಿ ನಡೆಸಿದ ಹಲ್ಲೆಯ ಸಂಪೂರ್ಣ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿದೆ.

Comments are closed.