ಕರ್ನಾಟಕ

ಸಾಲ ಮನ್ನಾ ಮಾಡದಿದ್ದರೆ ರೈತರನ್ನು ಬೀದಿಗೆ ಇಳಿಸದಿದ್ದರೆ ನನ್ನ ಹೆಸರು ಬಿಎಸ್ ಯಡಿಯೂರಪ್ಪ ಅಲ್ಲ…

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್ ನಲ್ಲಿ ಅಸಮಾಧಾನ ಇರುವ ಮುಖಂಡರೆಲ್ಲಾ ಬಿಜೆಪಿಗೆ ಬನ್ನಿ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಸಾಲಮನ್ನಾ ಮಾಡಪ್ಪಾ, ನೋಡೋಣ. ಸಾಲ ಮನ್ನಾ ಮಾಡದಿದ್ದರೆ ರೈತರನ್ನು ಬೀದಿಗೆ ಇಳಿಸದಿದ್ದರೆ ನನ್ನ ಹೆಸರು ಬಿಎಸ್ ಯಡಿಯೂರಪ್ಪ ಅಲ್ಲ..ಇದು ಬುಧವಾರ ಕಾಂಗ್ರೆಸ್, ಜೆಡಿಎಸ್ ಮೈತ್ರಿ ವಿರೋಧಿಸಿ ಮೌರ್ಯ ಸರ್ಕಲ್ ನಲ್ಲಿ ನಡೆಸುತ್ತಿದ್ದ ಕರಾಳ ದಿನಾಚರಣೆಯಲ್ಲಿ ನಿಯೋಜಿತ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಪರಿ!

ಪ್ರಣಾಳಿಕೆ ರೀತಿ ರಾಜ್ಯ ಸರ್ಕಾರ ನಡೆಸದಿದ್ದರೆ, ಸಾಲ ಮನ್ನಾ ಮಾಡದಿದ್ದರೆ ರಾಜ್ಯ ಬಂದ್ ಮಾಡುತ್ತೇವೆ. ನಿಮಗೆ ಸಂಪುಟ ವಿಸ್ತರಣೆ ಮಾಡುವ ಯೋಗ್ಯತೆ ಇದ್ಯಾ? ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಪರ ಬ್ಯಾಟಿಂಗ್!

ಮೊದಲು ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಗೆ ಎಟಿಎಂ ಆಗಿದ್ದರು, ಆದರೆ ಈಗ ಹೈಕಮಾಂಡ್ ಕುಮಾರಸ್ವಾಮಿಯವರನ್ನು ಮಾತ್ರ ಕರೆಯಿಸಿಕೊಂಡು ಮಾತಕತೆ ನಡೆಸಿದೆ. ಇದು ಕುರುಬ ಸಮುದಾಯಕ್ಕೆ ನೋವು ತಂದಿದೆ ಎಂದು ಹೇಳಿದರು.

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಕೂಟ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬಿಜೆಪಿ ಶಾಸಕರು ಗೈರು ಹಾಜರಾಗಬೇಕೆಂದು ಬಿಜೆಪಿ ಹೈಕಮಾಂಡ್ ಮಂಗಳವಾರ ಸಂದೇಶ ರವಾನಿಸಿತ್ತು. ಅಲ್ಲದೇ ಬುಧವಾರ ರಾಜ್ಯಾದ್ಯಂತ ಕರಾಳ ದಿನಾಚರಣೆಗೆ ಬಿಎಸ್ ಯಡಿಯೂರಪ್ಪ ಕರೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

Comments are closed.