ಕರ್ನಾಟಕ

ಯಡಿಯೂರಪ್ಪ ರಾಜೀನಾಮೆ ಕುರಿತು ವಿವಿಧ ರಾಜಕೀಯ ಗಣ್ಯರ ಅಭಿಪ್ರಾಯಗಳು!

Pinterest LinkedIn Tumblr

1
ಬೆಂಗಳೂರು: ಸಿಎಂ ಆಗಿದ್ದ ಯಡಿಯೂರಪ್ಪ ಅವರು ವಿಶ್ವಾಸಮತ ಯಾಚನೆಗೂ ಮುನ್ನವೇ ರಾಜೀನಾಮೆ ನೀಡಿ ನಿರ್ಗಮಿಸಿರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ಟ್ವಿಟರ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾರು ಏನೆಂದಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ..

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಯಾವುದೇ ಸಂಸ್ಥೆಗೂ ಗೌರವ ನೀಡುವುದಿಲ್ಲ, ರಾಷ್ಟ್ರಗೀತೆಗೂ ಮುಂಚೆಯೇ ಅವರು ಎದ್ದು ಹೋಗಿದ್ದಾರೆ. ಸ್ವತಃ ಪ್ರಧಾನಿಯವರೇ ರಾಜ್ಯದಲ್ಲಿ ಶಾಸಕರ ಖರೀದಿಗೆ ಸೂಚನೆ ನೀಡಿದ್ದರು.- ರಾಹುಲ್ ಗಾಂಧಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ

ರಾಹುಲ್‌ಗೆ ತಲೆ ಕೆಟ್ಟಿದೆ ಎಂದು ಜನರು ಹೇಳುತ್ತಾರೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿರುವ ಪ್ರಧಾನಿ ಮೋದಿ ಅವರ ವಿರುದ್ಧ ಅದ್ಹೇಗೆ ರಾಹುಲ್ ಆರೋಪ ಮಾಡುತ್ತಾರೆ? – ಅನಂತ್ ಕುಮಾರ್, ಬಿಜೆಪಿ ನಾಯಕ

ಕಾಂಗ್ರೆಸ್, ಜೆಡಿಎಸ್‌, ಪಕ್ಷೇತರ ಮತ್ತು ಬಿಎಸ್‌ಪಿ ಶಾಸಕರಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಕೇಂದ್ರ ಸರ್ಕಾರದ ಆಮಿಷ ಮತ್ತು ಇತರ ಎಲ್ಲ ಪ್ರಯತ್ನಗಳ ಹೊರತಾಗಿಯೂ ಅವರು ಪಕ್ಷದ ನಾಯಕತ್ವ ಮತ್ತು ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ.- ಗುಲಾಂ ನಬಿ ಆಜಾದ್, ಕಾಂಗ್ರೆಸ್ ನಾಯಕ

ಪ್ರಜಾಪ್ರಭುತ್ವವನ್ನು ನಾಶಪಡಿಸುವ ಬಿಜೆಪಿಯ ಎಲ್ಲ ಪ್ರಯತ್ನ ಕರ್ನಾಟಕದಲ್ಲಿ ಕೊನೆಯಾಗಿದೆ. ಇನ್ನಾದರೂ ಬಿಜೆಪಿ ಪಾಠ ಕಲಿಯುವುದೇ? ದೇಶದ ನ್ಯಾಯಾಂಗ ಪ್ರಜಾಪ್ರಭುತ್ವವನ್ನು ಕಾದಿದೆ.- ಅರವಿಂದ ಕೇಜ್ರಿವಾಲ್, ದೆಹಲಿ ಸಿಎಂ

Comments are closed.