
ತೆಲಂಗಾಣ: ಸ್ವಚ್ಛ ಭಾರತ ಅಭಿಯಾನದಡಿ ಪುಣೆಯಲ್ಲಿ ಆಯೋಜಿಸಲಾಗಿದ್ದ ಬಯಲು ಮಲವಿಸರ್ಜನೆ ಮುಕ್ತ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ತೆಲಂಗಾಣದ ಮೇಡಕ್ ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಧರ್ಮ ರೆಡ್ಡಿ ಅವರು ಬರಿಗೈಯ್ಯಲ್ಲಿ ಶೌಚಗುಂಡಿಯನ್ನು ಶುಚಿಗೊಳಿಸುವ ಮೂಲಕ ಸರಳತೆ ಮೆರೆದಿದ್ದಾರೆ.
ಕಳೆದ ವರ್ಷ ಮೇಡಕ್ ಜಿಲ್ಲೆಯನ್ನು ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲಾಗಿದೆ. ರಾಜ್ಯದಲ್ಲಿ ಬಯಲು ಶೌಚ ಮುಕ್ತವೆಂದು ಘೋಷಿಸಲ್ಪಟ್ಟ ಜಿಲ್ಲೆಗಳ ಪಟ್ಟಿಯಲ್ಲಿ 8 ನೇ ಜಿಲ್ಲೆಯಾಗಿ ಮೇಡಕ್ ಸೇರ್ಪಡೆಗೊಂಡಿದೆ.
ಮಲವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸುವುದರ ಕುರಿತಂತೆ ಈ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಮೊದಲು ಸಂಬಂಧಿತ ಸಿಬ್ಬಂದಿ ಸಂಪೂರ್ಣ ಪ್ರಕ್ರಿಯನ್ನು ಪ್ರದರ್ಶಿಸಿದರು. ಬಳಿಕ ನೇರವಾಗಿ ಮಲಗುಂಡಿಗೆ ಇಳಿದ ಜಿಲ್ಲಾಧಿಕಾರಿ ಸಾವಯವ ಗೊಬ್ಬರವನ್ನು ಬರಿಗೈಯಲ್ಲಿ ಹಿಡಿದು ತೋರಿಸಿದರು.
ಬರಿಗೈಯಲ್ಲಿ ಮಲಗುಂಡಿ ಸ್ವಚ್ಛಗೊಳಿಸಿದ ಜಿಲ್ಲಾಧಿಕಾರಿ
ತೆಲಂಗಾಣ ರಾಜ್ಯ ಸಹ ಬಯಲು ಶೌಚ ಮುಕ್ತ ರಾಜ್ಯಗಳ ಪಟ್ಟಿಗೆ ಬಹಳ ಹತ್ತಿರದಲ್ಲಿದೆ. ಎಕಾನಾಮಿಕ್ಸ್ ಟೈಮ್ಸ್‌ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಹಿಮಾಚಲ ಪ್ರದೇಶ, ಕೇರಳ, ಉತ್ತರಾಖಂಡ್, ಹರಿಯಾಣ, ಗುಜರಾತ್, ಗುಜರಾತ್, ಚಂಡೀಗಢ, ದಮನ್ ಮತ್ತು ದಿಯು, ಅರುಣಾಚಲ ಪ್ರದೇಶ, ಛತ್ತೀಸ್‌ಗಢ ಮತ್ತು ಮೇಘಾಲಯ ಬಯಲು ಶೌಚ ಮುಕ್ತ ರಾಜ್ಯಗಳೆಂದು ಘೋಷಿಸಲ್ಪಟ್ಟಿವೆ.
Comments are closed.