ಕರ್ನಾಟಕ

ಡಾಲರ್ಸ್‌ ಕಾಲೋನಿಯಲ್ಲಿರುವ ಬಿಕೋ ಎನ್ನುತ್ತಿರುವ ಯಡಿಯೂರಪ್ಪ ನಿವಾಸ

Pinterest LinkedIn Tumblr


ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರಿಂದು ತುಂಬಿ ಹೋಗಿದ್ದ ಡಾಲರ್ಸ್‌ ಕಾಲೋನಿಯಲ್ಲಿರುವ ನಿವಾಸ ರಾಜೀನಾಮೆ ಬೆನ್ನಲ್ಲೇ ಬಿಕೋ ಎನ್ನುತ್ತಿದೆ. ನಿವಾಸದಲ್ಲಿ ಭಾನುವಾರ ನೀರವ ಮೌನ ಆವರಿಸಿದೆ.

ಬೆಳಗ್ಗೆ ಬೇಗನೆ ಎದ್ದಿರುವ ಬಿಎಸ್‌ವೈ ಅವರು ವಾಕಿಂಗ್‌ ಮುಗಿಸಿ ಮರಳಿದ್ದಾರೆ. ಮನೆ ಸುತ್ತಲು ನಿಯೋಜಿಸಲಾಗಿದ್ದ ಭಾರೀ ಪ್ರಮಾಣದ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದ್ದು, ರಸ್ತೆಗೆ ತಡೆ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ ‘ಮೇ 23 ರಂದು ಪಕ್ಷದ ಪರಾಜಿತ ಅಭ್ಯರ್ಥಿಗಳೊಂದಿಗೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಸಭೆ ನಡೆಸಿ ಸೋಲಿನ ಬಗ್ಗೆ ಪರಾಮರ್ಶೆ ನಡೆಸುತ್ತೇನೆ . ಸೋತವರಿಗೆ ಧೈರ್ಯ ತುಂಬುತ್ತೇನೆ’ ಎಂದರು.

‘2019 ರ ಲೋಕಸಭಾ ಚುನಾವಣೆಗೆ ಈಗಿಂದಲೇ ಸಜ್ಜಾಗುತ್ತಿದ್ದೇವೆ’ ಎಂದರು.

Comments are closed.