ಕರ್ನಾಟಕ

ಹಂಗಾಮಿ ಸ್ಪೀಕರ್‌ ಆಗಿ ಬೋಪಯ್ಯ ಆಯ್ಕೆ: ಪೂರ್ಣಾವಧಿ ಸ್ಪೀಕರ್‌ ಕೈಯಲ್ಲಿ ಸರಕಾರದ ಅಳಿವು-ಉಳಿವು!

Pinterest LinkedIn Tumblr


ಬೆಂಗಳೂರು: ವಿರಾಜಪೇಟೆಯಿಂದ ವಿಧಾನಸಭೆಗೆ ಆಯ್ಕೆಯಾದ ಕೆ.ಜಿ. ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್‌ ಆಗಿ ಆಯ್ಕೆಯಾಗಿದ್ದಾರೆ.

ಶನಿವಾರ ಸಂಜೆ 4ಕ್ಕೆ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಬಹುಮತ ಸಾಬೀತು ಪಡಿಸುವಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್‌ ಹುದ್ದೆಗೆ ನೇಮಿಸಲು ರಾಜ್ಯಪಾಲ ವಾಲಾ ಅವರಿಗೆ ಬಿಜೆಪಿ ಶಿಫಾರಸು ಮಾಡಿತು.

ಅದರಂತೆ ಬೋಪಯ್ಯ ಹಂಗಾಮಿ ಸ್ಪೀಕರ್ ಆಗಿ ಆಯ್ಕೆಯಾಗಿದ್ದು, ರಾಜ್ಯಪಾಲ ವಜೂಭಾಯಿ ವಾಲಾ ಶುಕ್ರವಾರ ಸಂಜೆ ಪ್ರಮಾಣ ಬೋಧಿಸಿದರು.

2008ರ ಬಿಜೆಪಿ ಸರಕಾರದಲ್ಲಿ ಸ್ಪೀಕರ್‌ ಆಗಿ ಕಾರ್ಯನಿರ್ವಹಿಸಿದ ಬೋಪಯ್ಯ, ನೂತನವಾಗಿ ವಿಧಾನಸಭೆಗೆ ಆಯ್ಕೆಯಾದ 219 ಸದಸ್ಯರಿಗೆ ಪ್ರಮಾಣ ವಚನ ಶನಿವಾರ ಬೋಧಿಸಲಿದ್ದಾರೆ.

ಈ ಬಳಿಕ ಪೂರ್ಣಾವಧಿ ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸರ್ವಾನುಮತದಿಂದ ಬಿಜೆಪಿ ಅಭ್ಯರ್ಥಿಯೇ ಸ್ಪೀಕರ್‌ ಆಗಿ ಆಯ್ಕೆಯಾದಲ್ಲಿ ಬಿಜೆಪಿ ಸರಕಾರ ರಚನೆಗೆ ಯಾವುದೇ ಅಡ್ಡಿಯಾಗದು. ಒಂದು ವೇಳೆ ಸ್ಪೀಕರ್‌ ಸ್ಥಾನಕ್ಕೆ ಚುನಾವಣೆ ನಡೆದು, ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದ ಸ್ಪೀಕರ್‌ ಅಭ್ಯರ್ಥಿ ಜಯ ಗಳಿಸಿದರೆ ಈ ಸರಕಾರವೂ ವಿಶ್ವಾಸಮತ ಕಳೆದುಕೊಂಡಂತಾಗಲಿದೆ.

Comments are closed.