ಕರ್ನಾಟಕ

ಸರಕಾರ ರಚಿಸುವ ಸಲುವಾಗಿ ಬಹುಮತ ಸಾಬೀತಿಗೆ 7 ದಿನ ಕಾಲಾವಕಾಶ ಕೋರಿದ್ದೇವೆ: ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ಸರಕಾರ ರಚಿಸುವ ಸಲುವಾಗಿ ಬಹುಮತ ಸಾಬೀತಿಗೆ 7 ದಿನ ಕಾಲಾವಕಾಶ ನೀಡುವಂತೆ ರಾಜ್ಯಪಾಲ ವಿ.ಆರ್. ವಾಲಾ ಅವರಿಗೆ ಮನವಿ ಮಾಡಿದ್ದೇವೆ ಎಂದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.

ರಾಜಭವನಕ್ಕೆ ಬಿಜೆಪಿ ಮುಖಂಡರಾದ ಯಡಿಯೂರಪ್ಪ, ಕೇಂದ್ರ ಸಚಿವ ಅನಂತ ಕುಮಾರ್ ಹಾಗೂ ಇತರರು ಭೇಟಿ ಮಾಡಿ, ರಾಜ್ಯಪಾಲರೊಂದಿಗೆ ಸರಕಾರ ರಚನೆಗೆ ಕಾಲಾವಕಾಶ ಕೋರಿದರು.

ಭೇಟಿ ಬಳಿಕ, ಅಪವಿತ್ರ ಮೈತ್ರಿ ಬಗ್ಗೆ ನಾನು ಮಾತನಾಡಲ್ಲ. ಬಿಜೆಪಿಗೆ 104 ಸ್ಥಾನ ದಕ್ಕಿವೆ. ಹೀಗಾಗಿ ರಾಜ್ಯಪಾಲರ ಬಳಿ ತೆರಳಿದ್ದೆವು. 7 ಸೀಟಿನ ಬಗ್ಗೆಯೂ ನಾನು ಸ್ಪಷ್ಟೀಕರಣ ನೀಡಿಲ್ಲ. ಬಹು ಮತ ಸಾಬೀತಿಗೆ ಸಮಯಾವಕಾಶ ಕೊಡಲಿದ್ದಾರೆ ಎಂದರು.

Comments are closed.