ಕರ್ನಾಟಕ

ಇವಿಎಂ, ವಿವಿಪ್ಯಾಟ್ ನಲ್ಲಿ ದೋಷ; ಜಗದೀಶ್ ಶೆಟ್ಟರ್ ಫಲಿತಾಂಶಕ್ಕೆ ಆಯೋಗ ತಡೆ!

Pinterest LinkedIn Tumblr


ಹುಬ್ಬಳ್ಳಿ: ಇವಿಎಂ, ವಿವಿಪ್ಯಾಟ್ ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಫಲಿತಾಂಶಕ್ಕೆ ಚುನಾವಣಾ ಆಯೋಗ ತಡೆ ನೀಡಿದೆ.

ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹಾಗೂ ಕಾಂಗ್ರೆಸ್ ನಿಂದ ಮಹೇಶ್ ನಾಲವಾಡ ಸ್ಪರ್ಧಿಸಿದ್ದರು.

ಚಲಾವಣೆಯಾಗಿದ್ದಕ್ಕಿಂತ 207 ಹೆಚ್ಚು ಮತವನ್ನು ಇವಿಎಂ ತೋರಿಸಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ನಾಲವಾಡ ಅವರು ಫಲಿತಾಂಶವನ್ನು ತಡೆ ಹಿಡಿಯುವಂತೆ ಮನವಿ ಮಾಡಿದ್ದರು.

ಇದರಿಂದಾಗಿ ಜಗದೀಶ್ ಶೆಟ್ಟರ್ ಅವರ ಚುನಾವಣಾ ಫಲಿತಾಂಶಕ್ಕೆ ಆಯೋಗದ ಅಧಿಕಾರಿಗಳು ತಡೆ ನೀಡಲು ಮೌಖಿಕವಾಗಿ ಒಪ್ಪಿಗೆ ಸೂಚಿಸಿರುವುದಾಗಿ ವರದಿ ತಿಳಿಸಿದೆ.

Comments are closed.