ಕರ್ನಾಟಕ

ಮತ ಚಲಾಯಿಸಿ ಅದನ್ನು ವಿಡಿಯೋ ಮಾಡಿದ ಯುವಕರು!

Pinterest LinkedIn Tumblr


ಕೊಪ್ಪಳ: ಜಿಲ್ಲೆಯ ಕನಕಗಿರಿ, ಕೊಪ್ಪಳ ಹಾಗೂ ಯಲಬುರ್ಗಾ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತಯಂತ್ರದ ಮುಂದೆ ನಿಂತು ಮತದಾನ ಮಾಡಿದ ಫೋಟೊ ಹಾಗೂ ವಿಡಿಯೋ ವೈರಲ್‌ ಆಗಿದೆ.

ಕೊಪ್ಪಳ ಕಾಂಗ್ರೆಸ್‌ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಹಾಗೂ ಬಿಜೆಪಿ ಅಭ್ಯರ್ಥಿ ಅಮರೇಶ ಕರಡಿ ಅವರಿಗೆ ಆಯಾ
ಮತದಾರನು ಮತಯಂತ್ರದ ಮುಂದೆ ವೋಟ್‌ ಮಾಡಿದ್ದಲ್ಲದೇ ಅಲ್ಲಿಯೇ ನಿಂತು ಓಟ್‌ ಮಾಡುವ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಕನಕಗಿರಿಯಲ್ಲೂ ಕಾಂಗ್ರೆಸ್‌ ಅಭ್ಯರ್ಥಿ ಶಿವರಾಜ ತಂಗಡಗಿ, ಯಲಬುರ್ಗಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್‌ ಅವರಿಗೆ ಓಟ್‌ ಮಾಡಿದ ಕುರಿತು ಫೋಟೋ ಕ್ಲಿಕ್ಕಿಸಿಕೊಂಡು ವಾಟ್ಸ್‌ ಆ್ಯಪ್‌ನಲ್ಲಿ ಫೋಟೋ ಹರಿ ಬಿಟ್ಟಿದ್ದಾನೆ.

2ನೇ ಬಾರಿ ಮತ ಹಾಕಲು ಹೋಗಿ ಸಿಕ್ಕಿಬಿದ್ದ
ಮಲೇಬೆನ್ನೂರು: ಪಟ್ಟಣದ ಜಿಬಿಎಂ ಶಾಲೆಯ ಮತಗಟ್ಟೆಯಲ್ಲಿ ಎರಡನೇ ಬಾರಿ ಮತ ಚಲಾಯಿಸಿದ ವ್ಯಕ್ತಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಶನಿವಾರ ನಡೆದಿದೆ. ಪಟ್ಟಣದ ರಾಜೇಶ ಎಂಬಾತ ಒಂದು ಬಾರಿ ಮತದಾನ ಮಾಡಿ, ಮತ್ತೂಮ್ಮೆ ಬೇರೆಯವರ ಹೆಸರಿನಲ್ಲಿ ನಕಲಿ ಮತದಾನ ಮಾಡಿ ಸಿಕ್ಕಿಬಿದ್ದಿದ್ದಾನೆ.

ಚುನಾವಣಾ ಸಿಬ್ಬಂದಿಯೇ ಬದಲು!
ಗದಗ: ಶಿರಹಟ್ಟಿ ಕ್ಷೇತ್ರದ ಮುಂಡರಗಿ ಪಟ್ಟಣದ 42ನೇ ಮತಗಟ್ಟೆಯಲ್ಲಿ ಪರೋಕ್ಷವಾಗಿ ಕಾಂಗ್ರೆಸ್‌ ಬೆಂಬಲಿಸುತ್ತಿದ್ದ ಶಿಕ್ಷಕ ಶಂಶಾದ್‌ ಕದಾಂಪುರ ಎಂಬುವವರನ್ನು ಚುನಾವಣಾ ಅಧಿ ಕಾರಿ ಮತಗಟ್ಟೆಯಿಂದ ಹೊರ ಹಾಕಿದ ಘಟನೆ ಶನಿವಾರ ನಡೆದಿದೆ. ಶಂಶಾದ್‌ ಕದಾಂಪುರ್‌ ಮತ ದಾರರಿಗೆ ಹಸಿರು ಬಣ್ಣದ ಗುಂಡಿ ಎಂದು ನಿರ್ದೇಶಿಸುತ್ತಿದ್ದರು. ಈ ಕುರಿತು ಆಕ್ಷೇಪ ವ್ಯಕ್ತವಾಗಿದ್ದರಿಂದ ಚುನಾವಣಾ ಸಿಬ್ಬಂದಿಯನ್ನು ಬದಲಾಯಿಸಲಾಗಿದೆ.

Comments are closed.