ಕರ್ನಾಟಕ

ಭೀಕರ ರಸ್ತೆ ಅಪಘಾತ; ಮಗ-ಮೊಮ್ಮಗನ ಸಾವಿನ ಸುದ್ದಿಗೆ ತಾತನೂ ಹೃದಯಾಘಾತದಿಂದ ಸಾವು

Pinterest LinkedIn Tumblr


ದಾವಣಗೆರೆ: ಚನ್ನಗಿರಿಯ ಗುಲ್ಲಹಳ್ಳಿ ಬಳಿ ನಡೆದ ಭೀಕರ ಅಪಘಾತದಲ್ಲಿ ತಂದೆ ಮಗ ಸಾವನ್ನಪ್ಪಿದ ದುರ್ಘ‌ಟನೆ ನಡೆದು ಕೆಲ ಹೊತ್ತಲ್ಲೇ ವಿಷಯ ತಿಳಿದು ತಾತನೂ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ಭಾನುವಾರ ನಡೆದಿದೆ.

ಬೊಲೆರೊ ವಾಹನ ಢಿಕ್ಕಿಯಾದ ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ಶಾಮಿಯಾನ ಅಂಗಡಿಯ ಮಾಲೀಕ 55 ವರ್ಷದ ಅಸ್ಲಮ್‌ ಮತ್ತು 23 ವರ್ಷದ ಪುತ್ರ ಖಲೀಲ್‌ ಅಸ್ಲಮ್‌ ಅವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಈ ವಿಚಾರ ತಿಳಿದು ಮನೆಯಲ್ಲಿದ್ದ ಅಸ್ಲಮ್‌ ಅವರ ತಂದೆ 77 ವರ್ಷದ ಸೈಯದ್‌ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೂವರ ಸಾವಿನಿಂದ ಕುಟುಂಬದವರ ಆಕೃಂದನ ಮುಗಿಲು ಮುಟ್ಟಿದೆ.

ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೊಲೆರೋ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Comments are closed.